Sunday 26 May 2013

laxmi prasad: ಗಿಳಿ ಬಾಗಿಲು -ಎಂಗಳಲ್ಲಿ ಅಮ್ಮಂಗೆ ಗೌರವ ವಚನ

laxmi prasad: ಗಿಳಿ ಬಾಗಿಲು -ಎಂಗಳಲ್ಲಿ ಅಮ್ಮಂಗೆ ಗೌರವ ವಚನ:   ಎಂಗಳಲ್ಲಿ ಅಮ್ಮಂಗೆ ಅಬ್ಬೆ ಹೇಳಿ  ಹೇಳುದು .ಇತ್ತೀಚಿಗಂಗೆ ೩೦ -೩೫ ವರ್ಷಂಗ ಳಲ್ಲಿ  ಅಬ್ಬೆಯ ಬದಲು ಅಮ್ಮ ಹೇಳುವ ಪದ ರೂಡಿ ಗೆ ಬೈಂದು .ಎನ್ನ ಅಪ್ಪ  ಅಮ್ಮ ಎಲ್ಲ ಅವರ ...

ಗಿಳಿ ಬಾಗಿಲು -ಎಂಗಳಲ್ಲಿ ಅಮ್ಮಂಗೆ ಗೌರವ ವಚನ


 ಎಂಗಳಲ್ಲಿ ಅಮ್ಮಂಗೆ ಅಬ್ಬೆ ಹೇಳಿ  ಹೇಳುದು .ಇತ್ತೀಚಿಗಂಗೆ ೩೦ -೩೫ ವರ್ಷಂಗ ಳಲ್ಲಿ  ಅಬ್ಬೆಯ ಬದಲು ಅಮ್ಮ ಹೇಳುವ ಪದ ರೂಡಿ ಗೆ ಬೈಂದು .ಎನ್ನ ಅಪ್ಪ  ಅಮ್ಮ ಎಲ್ಲ ಅವರ ಅಮ್ಮನ ಹೇಳಿರೆ ಎನ್ನ ಅಜ್ಜ್ಯಕ್ಕಳ ಅಬ್ಬೆ ಹೇಳಿಯೇ ದೆನಿಗೇಳುದು.ಬಹುಷ ಕನ್ನಡ ಭಾಷೆಯ ಪ್ರಭಾವಂದಾಗಿ ಅಬ್ಬೆ ಅಮ್ಮ ಆದ್ದು  ಆದಿಕ್ಕು. ಈಗ ಇಂಗ್ಲೀಷಿನ ಪ್ರಭಾವಂದಾಗಿ ಅಮ್ಮ ಮಮ್ಮಿ ಆದ ಹಾಂಗೆ !
 ಅದು ಏನೇ ಇರಲಿ ,ಎಂಗಳ ಕೋಳ್ಯೂರು ಸೀಮೆಲಿ ಅಮ್ಮಂಗೆ ಏಕವಚನ ಇಲ್ಲೆ .ಹಾಂಗೇಳಿ  ಬಹುವಚನವೂ ಇಲ್ಲೆ.ಏಕವಚನ ಬಹುವಚನಂಗಳ ನಡುವಿಲಿ ಒಂದು ವಿಶಿಷ್ಟ ವಚನ ಇದ್ದು .ಆನು ಅದರ ಗೌರವ ವಚನ ಹೇಳಿ ದೆನಿಗೇಳಿದ್ದೆ .ವಿದ್ವಾಂಸರುಗ ಇದಕ್ಕೆ ಎಂತ ಹೇಳಿ ಹೇಳ್ತವು?ಇದು ಅವರ ಗಮನಕ್ಕೆ ಬೈಂದ ? ಹೇಳಿ ಎನಗೆ ಗೊಂತಿಲ್ಲೆ .
ಎಂಗಳ ಭಾಷೆಲಿ ಪುರುಷರಿಂಗೆ  ಅವರವರ ಸ್ಥಾನಕ್ಕೆ ಅನುಗುಣವಾಗಿ ಏಕವಚನ ಬಹುವಚನ ಇದ್ದು .ಸಾಮಾನ್ಯವಾಗಿ ಅಪ್ಪ ಅಜ್ಜಂಗೆ , ಮಾವುಗಳಿಂಗೆ, ಮಾವನೋರಿಂಗೆ ಮತ್ತೆ ಗುರುಗೊಕ್ಕೆ ಬಹುವಚನ .ಮತ್ತೆ ಒಳುದೋರಿಂಗೆಲ್ಲ ಏಕವಚನವೆ ಇಪ್ಪದು .ಉದಾ -ಅಪ್ಪ ಬಂದವು .ಅಜ್ಜ  ಬೈನ್ದವು  ಇತ್ಯಾದಿ ಅಪ್ಪಂಗೆ ಕೂಡ ಕೆಲವು ಕಡೆ ಏಕವಚನ ಇದ್ದು .   ಅಣ್ಣ ಮಾವ ಅಪ್ಪಚ್ಚಿ ತಮ್ಮ ಎಲ್ಲೊರಿಂಗು ಏಕವಚನ .ಉದಾ-ಅಣ್ಣ ಬಂದ ಮಾವ ಬಕ್ಕು ಇತ್ಯಾದಿ .
ಇನ್ನು ಹೆಮ್ಮಕ್ಕೊಗೆ ಪ್ರಾಣಿಗೊಕ್ಕೆ ಏಕವಚನ ಇಪ್ಪದು ಉದಾ-ಅದು (ಅವಳು )ಬಂತು,  ಅಕ್ಕ ಬಂತು ,ನಾಯಿ ಹೋತು .ಇಲ್ಲಿ ಸ್ತ್ರೀಲಿಗ ಮತ್ತೆ ನಪುಂಸಕ ಲಿಂಗಂಗೊಕ್ಕೆ ಯಾವುದೇ ವ್ಯತ್ಯಾಸ ಇಲ್ಲೇ ಎರಡಕ್ಕೂ ಒಂದೇ ರೀತಿ ಏಕವಚನ .ಹೆಮ್ಮಕ್ಕಳಲ್ಲಿದೆ ಅ ಅತ್ತಿಯೋರು (ಗೆಂಡನ ಅಬ್ಬೆ ),ಅತ್ತೆಗಳು (ಹೆಂಡತಿಯ ಅಬ್ಬೆ ) ಇವಕ್ಕೆ ಬಹುವಚನ ಇದ್ದು . ಉದಾ-ಅತ್ತೆ ಬೈನ್ದವು ,ಹೋದವು ಇತ್ಯಾದಿ   .ಒಳುದ ಹೆಮ್ಮಕ್ಕೊಗೆ ಏಕವಚನ ಉದಾ -ಚಿಕ್ಕಮ್ಮ ಬೈಂದು ,ಹೋಯಿದು ಇತ್ಯಾದಿ . 
ಇದರ ನಡುಗೆ ಅಮ್ಮಂಗೆ  ಅತ್ತಿಗೆಗೆ (ಅಣ್ಣನ ಹೆಂಡತಿ ) ಆನು ವಿಶಿಷ್ಟ ವಚನದ ಬಳಕೆ ಇದ್ದು .ಉದಾ-ಅಮ್ಮ ಬೈಂದ ,ಅಮ್ಮ ದೋಸೆ ತಿಂದಿದ .,ಅಮ್ಮ ಹೋಯಿದ .ಎಂಗಳ ಭಾಷೆಲಿ ಏಕವಚನ ಹೇಳುವಾಗ ಆ ಪದದ ಕಡೆಂಗೆ ಅನುನಾಸಿಕ ಇರ್ತು .ಉದಾ-ಆವಾ ಹೋಯಿದ ಹೇಳಿ ಹೇಳುವಾಗ ಕಡೆಯ ದ ದೊತ್ತಿನ್ಗೆ ಅನುನಾಸಿಕ ಇರ್ತು .ಆದರೆ ಅಮ್ಮ ಹೋಯಿದ ಹೇಳುವಗ  ಕಡೆಂಗೆ ಅನುನಾಸಿಕ ಇಲ್ಲೆ .ಅದೇ ರೀತಿ ಪ್ರಶ್ನಾರ್ಥಕ ವಾಗಿದ್ದರೆ ಅಲ್ಲಿದೆ ಅಮ್ಮಂಗೆ ಸಂಬಂಧಿಸಿ ಕೇಳುವಗ ರಜ್ಜ ವ್ಯತ್ಯಾಸ ಇದ್ದು 
ಉದಾ -ಅಮ್ಮ ಬೈನ್ದಳಾ ?ಅಮ್ಮ ಉಂಡಳಾ ?ಅಮ್ಮ ಒರಗಿದಳಾ ?.ಬೇರೆ ಹೆಮ್ಮಕ್ಕೊಗೆ ಹೇಳುವಗ  ತಂಗೆ ಬೈಂದಾ ?ಅದು ಉಂಡತ್ತಾ ? ಹೇಳಿ ಇರ್ತು .
ಇಲ್ಲಿ ಎನ್ನ ಗಮನಕ್ಕೆ ಬಂದ ವಿಚಾರವ ನಿಂಗಳ ಮುಂದೆ ಮಡುಗಿದ್ದೆ .ನಿಂಗಳ ಅಭಿಪ್ರಾಯವ ತಿಳಿಸಿದರೆ ಸಂತೋಷ .
               ಇನ್ನೊಂದರಿ ಕಾಂಬ 
                                             ನಮಸ್ಕಾರ
                                                                         -ಲಕ್ಷ್ಮಿ ಜಿ ಪ್ರಸಾದ 

Friday 24 May 2013

ಗಿಳಿ ಬಾಗಿಲು : ಎಂಗಳ ಮಕ್ಕಳ ಭಾಷೆ


                               
ಎಂಗಳ ಭಾಷೆಲಿ  ಸಣ್ಣ  ಮಕ್ಕಳತ್ತರೆ ಮಾತನಾಡುವಗ ಬಳಸುವ ಪದಂಗ ಭಾರಿ ಚೆಂದ, ಆದರೆ  ಎಂಗಳ ನಿತ್ಯದ ಬಳಕೆಯ ಪದಂಗಳ ಬದಲಿನ್ಗೆ ಬೇರೆ ಪದಂಗ ಇದ್ದು .ಇದೆಂತಕೆ ಹೀಂಗೆ ? ದೊಡ್ಡೋರ ಮಾತಿಲಿ ಇಲ್ಲದ್ದೆ ಇಪ್ಪ  ಪದಂಗಳ ಮಕ್ಕೊಗೆನ್ತಕೆ ಹೇಳಿಕೊಡುದು ಹೇಳಿ ತುಂಬ ಸರ್ತಿ ಎನಗೆ ಅನ್ಸಿದ್ದು .ಮೂಲತ ಈ ಪದಂಗಗಳೇ   ಎಂಗಳ ಭಾಷೆಲಿ ಇದ್ದದಾದಿಕ್ಕ ?ಕಾಲ ಕ್ರಮೇಣ ದೊಡ್ಡೋರ  ಮಾತಿಲಿ ಈಗ ಇಪ್ಪ ಪದಂಗ ಸೇರಿಗೊಂಡವ ?ಹಾಂಗಾಗಿ ಮಕ್ಕಳತ್ತರೆ ಮಾತಾಡುವಾಗ ಮಾತ್ರ ಮೂಲ ಪದಂಗಳ ಬಳಕೆ ಹಾಂಗೆ ಒಳುತ್ತಾ?ಎನಗೆ ಗೊಂತಿಲ್ಲೆ .ಹೀಂಗೆ ಆದಿಪ್ಪ ಸಾಧ್ಯತೆ ಇದ್ದು .ಈ  ಸಾಧ್ಯತೆಯ ತೀರಾ  ಸಾರಾ ಸಗಟಾಗಿ ಅಲ್ಲಗಳವಲೆ  ಸಾದ್ಯ ಇಲ್ಲೆ ಆನು ಗಮನಿಸಿದ ಕೆಲವು   ಮಕ್ಕಳ ಭಾಷೆಯ ಪದಂಗ ಹೀಂಗೆ ಇದ್ದು 
ಉಜ್ಜಿ :
 ಕಿಚ್ಚಿಂಗೆ ಅಥವಾ ಬೆಶಿಗೆ ಉಜ್ಜಿ ಹೇಳುವ ಪದವ ಮಕ್ಕಳತ್ತರೆ ಮಾತನಾಡುವಗ ಬಳಸುತ್ತೆಯ .  ಕಿಚ್ಚಿನತ್ತರೆ /ಬೆ ಶಿ ಇಪ್ಪಲ್ಲಿಗೆ ಹೋಗಡ ಹೇಳುಲೆ ಉಜ್ಜಿ ಹತ್ತರೆ ಹೋಗಡಾ ಹೇಳಿ  ಎಂಗ ಹೇಳುತ್ತೆಯ .ಉಜ್ಜಿ ಹೇಳುದು ಉಷ್ಣ ಹೇಳುವ ಪದದ ಹವ್ಯಕ ತದ್ಭವ ರೂಪ ಆದಿಕ್ಕು .ಮಕ್ಕೊಗೆ ಉಷ್ಣ ಹೇಳಿ ಹೇಳುಲೆ ಕಷ್ಟ ಅಕ್ಕು ಹೇಳಿ ಉಜ್ಜಿ ಹೇಳುವ ಪದ ಬಳಕೆಗೆ ಬಂದಿಕ್ಕು .ಕಾಲ ಕ್ರಮೇಣ ದೊಡ್ಡೋರ ಮಾತಿಲಿ ಉಷ್ಣದ ಬದಲಿನ್ಗೆ ಬೆಶಿ  ಹೇಳುವ ಪದ ರೂಡಿಗೆ ಬಂದಿರೆಕ್ಕು .ಆದರೆ ಮಕ್ಕಳತ್ತರೆ ಮಾತನಾಡುವಗ  ಉಜ್ಜಿ ಹೇಳುದು ಹಾಂಗೆ ಒಳುದಿರೆಕ್ಕು .
ದೀಜಿ :
 ಎಂಗಳ ಮಕ್ಕಳ ಭಾಷೇಲಿ ನೀರಿಂಗೆ ದೀಜಿ ಹೇಳುವ ಪದ ರೂಡಿಲಿ ಇದ್ದು .ನೀರಿಂಗೆ ದೀಜಿ ಹೇಳುಲೆ ಎಂತ ಕಾರಣ ಇಕ್ಕು ಹೇಳಿ  ಎನಗೆ ತಲೆಗೆ ಹೊವುತ್ತಿಲ್ಲೆ . ಎಂಗಳ ಮಕ್ಕಳ ಬಾಷೆಲಿ   ಬಿಟ್ರೆ ಬೇರೆಲ್ಲಿಯೂ ನೀರಿಂಗೆ ದೀಜಿ ಹೇಳಿ ಇಪ್ಪದು ಎನಗೆ ಗೊಂತಿಲ್ಲೆ .ಇದರ ಮೂಲ ರೂಪ ಎಂತಾದಿಕ್ಕು ಹೇಳಿ ಎನಗೆ ಗೊಂತಾವುತ್ತಾ ಇಲ್ಲೆ .
ಜಾಯಿ :
ಹಾಲಿನ್ಗೆ ಎಂಗಳ ಮಕ್ಕಳ ಭಾಷೆಲಿ ಜಾಯಿ ಹೇಳಿ ಹೇಳುದು . ಹಾಲು ಹೇಳುವ ಪದ ಜಾಯಿ ಹೇಳಿ ಅಪ್ಪ ಸಾಧ್ಯತೆ ಇಲ್ಲೆ .ಕ್ಷೀರ ಹೇಳುವ ಪದ ಕೂಡ ಜಾಯಿ ಹೇಳಿ ಆಗಿಪ್ಪ ಸಾಧ್ಯತೆ ಕಮ್ಮಿ ಕಾಣುತ್ತು.ಎಂಗಳ ಭಾಷೆಲಿ ಹಾಲಿನ್ಗೆ  ಬೇರೆ ಎಂತಾದರು ಪದ ಇದ್ದಿಕ್ಕ ?ಇಲ್ಲದ್ದರೆ ಮಕ್ಕಳ ಭಾಷೇಲಿ ಮಾತ್ರ ಜಾಯಿ ಹೇಳುವ ಪದ ಹೇಂಗೆ ಬಂತು ? 
ದಾದೆ :
ಎಂಗಳ ಮಕ್ಕಳ ಭಾಷೆಲಿ ಮನುಗು /ಒರಗು ಹೇಳುದಕ್ಕೆ ದಾದೆ ಮಾಡು ಹೇಳುವ ಪದ ಇದ್ದು .ಇದರ ಮೂಲ ರೂಪ ಎಂತಾದಿಕ್ಕು ?ಅಥವಾ ದೊಡ್ದೊರುದೆ ಮನುಗುದಕ್ಕೆ ದಾದೆ ಹೇಳಿಯೇ ಹೇಳಿಗೊಂಡಿತ್ತಿದವ ?
ಚಾಬು : 
ಎರುಗು ,ಹಲ್ಲಿ ,ಹಾತೆ ,ಜೆರಳೆ ,ಮೊಂಟೆ ಮೊದಲಾದ್ದಕ್ಕೆ ಮಕ್ಕಳ ಭಾಷೇಲಿ ಚಾಬು ಹೇಳಿ  ಹೇಳುದು .ತುಂಬ ಸಣ್ಣ ಮಕ್ಕಳತ್ತರೆ ಎಲ್ಲದಕ್ಕೂ ಚಾಬು ಹೇಳಿಯೇ ಹೇಳುದು . ಮಕ್ಕ ರಜ್ಜ ದೊಡ್ಡಪ್ಪಗ ಎರುಗು ಚಾಬು ಹಲ್ಲಿ  ಚಾಬು ಇತ್ಯಾದಿ ಇನ್ನೊಂದು ಪದ ಸೇರ್ಸಿ ಹೇಳ್ತವು .ಹಾವಿಂಗೆ ಕೂಡ ಚಾಬು ಹೇಳಿಯೇ ಹೇಳುದು .ಬಹುಷ ಹಾವು ಹೇಳುವ ಪದವೇ  ಚಾಬು ಪದದ ಮೂಲ ರೂಪ ಆದಿಕ್ಕು ಹೇಳಿ ಎನಗೆ ಅನ್ಸುತ್ತು .ಇದಲ್ಲದೆ ಬೂಚು ,ತಾಚಿ ಮೊದಲಾಗಿ ಸುಮ್ಮಾರು ವಿಶಿಷ್ಟ ಪದಂಗಳ ಬಳಕೆ ಇದ್ದು .ದೊಡ್ಡೋರ ಮಾತಿಲಿ ಇಲ್ಲದ್ದ ಇಂತ  ಪದಂಗ ಮಕ್ಕಳ ಭಾಷೇಲಿ ಮಾತ್ರ ಹೆಂಗೆ ಬಂತು ?ತಿಳುದೋರು ಹೇಳಿದರೆ ಸಂತೋಷ 
ಇನ್ನೊಂದರಿ ಕಾಂಬ 
ನಮಸ್ಕಾರ - ಡಾ.ಲಕ್ಷ್ಮಿ ಜಿ ಪ್ರಸಾದ

laxmiprasad: ಗಿಳಿ ಬಾಗಿಲು(ಹವ್ಯಕ ಅಂಕಣ ) - ಎಂಗಳ ಭಾಷೆ ರಜ್ಜ ಬೇರೆ

laxmiprasad: ಗಿಳಿ ಬಾಗಿಲು(ಹವ್ಯಕ ಅಂಕಣ ) - ಎಂಗಳ ಭಾಷೆ ರಜ್ಜ ಬೇರೆ:                                  .ಮೊನ್ನೆ ಫೇಸ್ ಬುಕ್ಕಿಲಿ  ಎನ್ನ ಸಣ್ಣಾದಿಪ್ಪಗಣ ಗೆಳೆಯ(ನೆಂಟ್ರು ) ಸೂರ್ಯನಾರಾಯಣ  ತೆಂಕ ಬೈಲು (ಈಗ ಅವ  ದೇಲಂತ ಬೆಟ್ಟಿನ ದೊಡ...