Sunday 14 December 2014

ಗಿಳಿಬಾಗಿಲು (ಹವ್ಯಕ ಬ್ಲಾಗ್ ) 34 ದೂರು ಕುಂಡೆಚ್ಚ :ಡಾ.ಲಕ್ಷ್ಮೀ ಜಿ ಪ್ರಸಾದ

ಹವ್ಯಕ ನುಡಿಗಟ್ಟು ಗಳ ಬಗ್ಗೆ ಬರೆಯದ್ದೆ ತುಂಬಾ ದಿನ ಆತು .ಬರವಲೆ ಪುರುಸೊತ್ತು ಆಯಿದಿಲ್ಲೇ ,ಒಟ್ಟಿಂಗೆ ಮನಸೂ ಇತ್ತಿಲ್ಲೆ.
ಆರಿಂಗೇ ಆದರೂ ನಮ್ಮ ಆಲೋಚನೆಗಳ ಅಕ್ಷರ ರೂಪಕ್ಕೆ ಇಳಿಸುದು ಅಷ್ಟೇನೂ ಸುಲಭದ ವಿಚಾರ ಅಲ್ಲ ,ಅದಕ್ಕೆ ಒಳ್ಳೆಯ ಮೂಡ್ ಇರಕ್ಕಾವುತ್ತು .
ಇಂದು ಉದಿಯಪ್ಪಗ ಆನು ಏಳುವಾಗಲೇ ಜಾಲಿನ ಮೀಸೆ ಹೂಗಿನ ಗೆಲ್ಲಿಂದ ಚಿಂಕ್ ಚಿಂಕ್  ಹೇಳಿ ಭಾರೀ ಬೊಬ್ಬೆ ಕೇಳುತ್ತ ಇತ್ತು .ಎಂತಸಂಗತಿ ಹೇಳಿ ಬಾಗಿಲು ತೆಗದು ನೋಡಿದೆ
ಎರಡು ಕುಂಡೆಚ್ಚಂಗ ಬೊಬ್ಬೆ ಹೊಡೆತ್ತ ಇದ್ದವು .ಎಂತಕಪ್ಪ ಇವು ಇಷ್ಟು ಬೊಬ್ಬೆ ಹೊಡವದು ಹೇಳಿ ಆ ಕಡೆ ಈ ಕಡೆ ನೋಡಿದೆ .ಎಂತದೂ ಕಂಡತ್ತಿಲ್ಲೆ.
ಆದರೆ ಇವರ ಬೊಬ್ಬೆ ಮುಂದುವರುದೇ ಇತ್ತು .ಸಾಮಾನ್ಯವಾಗಿ ಅವಕ್ಕೆ ಅಪಾಯಕಾರಿ ಆಗಿಪ್ಪ ಪುಚ್ಚೆ ನಾಯಿ ಹಾವು ಏನಾರು ಕಂಡರೆ ಕುಂಡೆಚ್ಚಂಗ ಬೊಬ್ಬೆ ಹೊಡೆತ್ತವು .
ಹಾಂಗೆ ಟೆರೇಸ್ ಹತ್ತಿ ನೋಡಿದೆ ಎಂತ ಇದ್ದು ಅಲ್ಲಿ ಹೇಳಿ ,ಅಷ್ಟಪ್ಪಗ ಒಂದು ಕುಂಡೆಚ್ಚ ಗಿಲಿಬಾಗಿಲಿನ ಹತ್ರಂಗೆ ಬಗ್ಗಿದ ಗೆಲ್ಲಿನ ಹತ್ತರೆ ಬಂದು ಬೊಬ್ಬೆ ಹಾಕುಲೇ ಸುರು ಮಾಡಿತ್ತು .ಹಾಂಗೆ ಆನು ಎಂತದು ಹೇಳಿ ಬಗ್ಗಿ ನೋಡಿದೆ !
ಅಲ್ಲಿ ಚಜ್ಜದ ಮೇಲೆ ಎಂಗಳ ಪಕ್ಕದ ಮನೆಯ ಪುಚ್ಚೆ ಒಂದು ಬೆಶಿಲು ಕಾಯಿಸಿಕೊಂಡು ಇತ್ತು..ಆನು ಬಗ್ಗಿ ನೋಡಿ ಅಪ್ಪಗ ಕುಂಡೆಚ್ಚಂಗಳ ಗಲಾಟೆ ಇನ್ನು ಜಾಸ್ತಿ ಆತು .ಈ ಪುಚ್ಚೆ ಮಾತ್ರ ಅವರ ಗಲಾಟೆಯ ಕೆಮಿಗೆ ಹಾಕಿಕೊಳ್ಳದ್ದೆ ಆರಾಮಾಗಿ ಒರಗಿತ್ತು .
ಮತ್ತೆ ಅದು ಎದ್ದು ಹೊಪಲ್ಲಿಯ ವರೆಗೂ ಅದರ ನೋಡಿ ನೋಡಿ ಕುಂಡೆಚ್ಚ ಗ ಚಿವ್ ಚಿವ್ ಹೇಳಿ ಮಾಡಿಕೊಂಡು ಇತ್ತಿದವು .
ಅಂಬಗ ಎನಗೆ ಪಕ್ಕನೆ ನೆನಪಾತು ದೂರು ಕುಂಡೆಚ್ಚ ಹೇಳುವ ನಮ್ಮ ಮಾತಿನ ಒಂದು ಬಳಕೆ
ಸಾಮನ್ಯವಾಗಿ ಮಕ್ಕೊಗೆ ಇದರ ಬಳಕೆ ಮಾಡುತ್ತು .ಅವರಿವರ ಬಗ್ಗೆ ಯಾವಾಗಲೂ ದೂರು ಕೊಡುವ ಮಕ್ಕೊಗೆ ದೂರು ಕುಂಡೆಚ್ಚ ಹೇಳಿ ಹೇಳುತ್ತವು.ಈ ಚೆಂದದ ನುಡಿಗಟ್ಟಿನ ಮೂಲ ಎಂತ ಹೇಳಿತಲೆಗೆ ಹೊದ್ದು ಇಂದೇ ಎನಗೆ .ಕುಂಡೆಚ್ಚ ಎಲ್ಲಿಯೇ ಒಂದು ಪುಚ್ಚೆ ಯನ್ನೂ ನಾಯಿಯನ್ನೂ ನೋಡಲಿ ಅವು ಚಿವ್ ಚಿವ್ ಮಾಡಿ ಎಲ್ಲರಿಂಗೂ ಈ ಬಗ್ಗೆ ತಿಳಿಸುತ್ತವು!ಇದರ ದೂರು ಕೊಡುದು ಹೇಳಿ ಭಾವಿಸಿ ದೂರು ಕೊಡುವ ಮಕ್ಕೊಗೆ ಈ ಮಾತಿನ ಬಳಕೆ ಬಂದಿಕ್ಕು ಹೇಳಿ ಎನಗೆ ಅನ್ಸಿತ್ತು ?ನಿಂಗೋಗೆ ಎಂತ ಅನ್ಸುತ್ತು ?