Saturday 17 February 2018

ಗಿಳಿಬಾಗಿಲು ಹವ್ಯಕ ಬ್ಲಾಗ್ : ಹವ್ಯಕ ನುಡಿಗಟ್ಟು - 46 ನುಸಿ ತಿಂದು ಜಾತಿ ಕೆಡುಲಾಗ© ಡಾ.ಲಕ್ಷ್ಮೀ ಜಿ ಪ್ರಸಾದ


ತುಂಬಾ ದಿನಂದ ನಂತರ ಗಿಳಿಬಾಗಿಲಿನ ತೆಗದ್ದೆ.ಕೆಲಸದ ಒತ್ತಡ ,ಬರವ ಮೂಡ್ ನ ಕೊರತೆ,ರಜ್ಜ ಆರೋಗ್ಯ ಸಮಸ್ಯೆಗ ಹೀಂಗೆ ಸುಮಾರು ನೆಪಂಗ ಇದ್ದು ಬರವಲಾಗದ್ದದಕ್ಕೆ.ಬಹುಶಃ ಅಂತರ್ಜಾಲವ ಹೆಚ್ಚಾಗಿ ಬಳಕೆ ಮಾಡುದೇ ಎಲ್ಲ ಸಮಯವ ತಿನ್ನುತ್ತು ಹೇಳುದು ಸರಿಯಾದ ಕಾರಣ ಹೇಳಿ ಅನ್ಸುತ್ತು.ಕಾರಣ ಏನೇ ಇರಲಿ,ಸುಮಾರು ದಿನಂದ ಎಂತದುದೆ ಬರದ್ದಿಲ್ಲೆ ಹೇಳುದು ವಾಸ್ತವ.
ಇಂದು ಎಂತಕೋ ಏನೋ ನುಸಿ ತಿಂದು ಜಾತಿ ಕೆಡ್ಸಿಕೊಂಬಲಾಗ  ಹೇಳುವ ಹವ್ಯಕ ನುಡಿಕಟ್ಟು ನೆನಪಾತು.ಎನ್ನ ಒಬ್ಬ ವಿದ್ಯಾರ್ಥಿ. ತುಂಬಾ ಪ್ರತಿಭಾವಂತ. ಒಳ್ಳೆಯ ಕಂಪೆನಿಲಿ ಕೆಲಸವೂ ಸಿಕ್ಕಿತ್ರು‌ತಿಂಗಳಿಂಗೆ ಒಂದು ಲಕ್ಷದಷ್ಟು ಸಂಬಳವೂ ಬಂದುಗೊಂಡು ಇತ್ತು. ಅವ ಆ ಕಂಪೆನಿಯ ಮೂರು ಲಕ್ಷ ರುಪಾಯಿಯ ಹೊಡವಲೆ ಎಂತದೋ ಮೋಸ ಮಾಡಿ ಸಿಕ್ಕಿಹಾಕಿಕೊಂಡ ಅಡ.ಅವನ ಕೆಲಸವೂ ಹೋತು.ಮರ್ಯಾದೆಯೂ ಹೋತು.ಅಲ್ಲ ಈ ಮೂರು ಲಕ್ಷ ಅವನ ಮೂರು ತಿಂಗಳ ಸಂಬಳದ ಪೈಸೆ .ಅಷ್ಟಕ್ಕಾಗಿ ಮೋಸ ಮಾಡಿ ಜೀವನ ಇಡೀ ಸಂಬಳ ಬಪ್ಪ ಒಳ್ಳೆಯ ಕೆಲಸ ಕಳಕೊಂಡ.
ಹೀಂಗೆ ಜುಜುಬಿ ಪೈಸೆಗೆ ಆತ್ಮ ಸಾಕ್ಷಿಯ ಮಾರಿಗೊಂಡು ಸಮಾಜದ ಮುಂದೆ ಬೆತ್ತಲಪ್ಪ ಸುಮಾರು ಜನಂಗ ಸಿಕ್ಕುತ್ತವು.
ಬಡ ಮಕ್ಕಳ ಕೈಂದ ತರಕಾರಿ,ಬೇಳೆ ಕಾಳು ತರ್ಸಿ ತಿಂಬ ಮಾಷ್ಟ್ರನ ಒಬ್ಬನ ಬಗ್ಗೆ ಆನು ಹೇಳುದು ಕೇಳಿದ್ದೆ. ಐವತ್ತ ಐವತ್ತೈದು ಸಾವಿರದಷ್ಟು ಸಂಬಳ ತೆಕ್ಕೊಂಬ ಅವ ರಾಜ್ಯ ಸಂಪನ್ಮೂಲ ವ್ಯಕ್ತಿ ಕೂಡ. ಬಾಯಿಲಿ ಭಾರೀ ಆದರ್ಶದ ದೊಡ್ಡ ದೊಡ್ಡ ಮಾತುಗ ಅಡ‌ .ಕಾರ್ಯಲ್ಲಿ ಮಾತ್ರ ಹೀಂಗೆ.ಬಡ ಮಕ್ಕಳ ಕೈಂದ ತರಕಾರಿ ಬೇಳೆ ಕಾಳು ತೆಕ್ಕೊಂಡು ಅವಕ್ಕೆ ಒಳ್ಳೆ ಮಾರ್ಕು ಕೊಡುದು,ಎಟೆಂಡೆನ್ಸ್ ಕೊಡುದು ಇತ್ಯಾದಿ ಮಾಡ್ತ ಅಡ.ಅದರ ಮೇಲಂದ ಇದು ಆರಿಂಗೂ ಗೊಂತಿಲ್ಲೆ ಹೇಳಿ ಜಾನ್ಸಿದ್ದ ಅಡ !
ಇಂತೋವು ಸುಮಾರು ಜೆನಂಗ ಇದ್ದವು ನಮ್ಮ ಸಮಾಜಲ್ಲಿ.

ಪುಚ್ಚೆ ಕಣ್ಣುಮುಚ್ಚಿಗೊಂಡು ಹಾಲು ಕುಡಿವಗ ಹೆರ ಇಡೀ ಕಸ್ತಲೆ ಆಯಿದು.ಹಾಂಗೆ ಆರೂ ನೋಡಿದ್ದವಿಲ್ಲೆ ಹೇಳಿ ಜಾನ್ಸುತ್ತಡ.ಹೀಂಗಾತು ಇವರ ಕತೆ.
ಇಂತೋರ ಬಗ್ಗೆ ಹೇಳುವ ನುಡಿಕಟ್ಟು. ನುಸಿ ತಿಂದು ಜಾತಿ ಕೆಡಿಸಿಕೊಂಬದು
ಬ್ರಾಹ್ಮಣರು ಸಸ್ಯಾಹಾರಿಗ.ಮಾಂಸ ತಿಂದರೆ ಜಾತಿ ಕಟ್ಟ ಹಾಂಗೆ.
 .ನುಸಿ ತೀರ ತೀರಾ ಸಣ್ಣ ಜೀವಿ.ಅದರಲ್ಲಿ ತಿಂಬಂತ ಮಾಂಸವೇ ಇಲ್ಲೆ.ಆದರೆ ನುಸಿ ತಿಂದರೂ ಜಾತಿ ಕಟ್ಟುಕಟ್ಟಲೆ ಮೀರಿದ ಹಾಂಗೆ ಆತು.ಒಂದೊಮ್ಮೆ ಜಾತಿ ಕೆಡುದೇ ಆದರೆ ಹಂದಿ ತಿನ್ನಕ್ಕು .ಹಂದಿಲಿ ಒಳ್ಳೆಯ ಕೊಬ್ಬು ಇಪ್ಪ ಕಾರಣ ಭಾರೀ ರುಚಿ ಅಡ.ಹಾಂಗಾಗಿ ತಿನ್ನಕ್ಕು ಹೇಳಿ ಇದ್ದರೆ ನುಸಿ ತಿಂಬದಲ್ಲ ಹಂದಿ ಮಾಂಸವೇ ತಿನ್ನಕ್ಕು. ನುಸಿ ತಿಂದು ಜಾತಿ ಕೆಡುಲಾಗ ಹೇಳಿ ಈ ನುಡಿಗಟ್ಟು ತಿಳಿಸುತ್ತು.
ಜುಜುಬಿ ಒಂದೆರಡು ಕಿಲ ತರಕಾರಿ, ಬೇಳೆ ಕಾಳು ಸೊಪ್ಪಿಂಗೆ ಮರ್ಯಾದಿ ಕಳಕೊಂಬಲಾಗ.ಜುಜುಬಿ ನಾಲ್ಕೈದು ಸಾವಿರ ಲಕ್ಷಕ್ಕೆ  ಅತ್ಮ ಸಾಕ್ಷಿಯ ಮಾರಿಕೊಂಬಲಾಗ‌.ಅದಿಲ್ಲದ್ದರೂ ನಮಗೆ ಬದುಕುಲೆ ಎಡಿತ್ತು.ಒಂದೊಮ್ಮೆ ಹೆಸರು ಹಾಳು ಮಾಡಿಕೊಂಬಲೆ ತಯಾರಿದ್ದರೆ ದೊಡ್ಡ ಗಾಳ ಹಾಕಕ್ಕು.ಪೈಸೆ ಹೊಡದರೆ ವಿಜಯ ಮಲ್ಯನ ಹಾಂಗೆ ಹತ್ತಿಪ್ಪತ್ತು ಸಾವಿ ಕೋಟಿಲಿ ಹೊಡೆಯಕ್ಕು.ರಜ್ಜ ಸಮಯ ಐಷಾರಾಮಲ್ಲಿ ಬದುಕುಲಕ್ಕು ಮತ್ತೆ ಅವನ ಹಾಂಗೆ ಹೆದರಿ ದೇಶ ಬಿಟ್ಟು ದುರ್ಯೋಧನ ವೈಶಂಪಾಯನ ಸರೋವರಲ್ಲಿ ಹುಗ್ಗಿ ಕೂದ ಹಾಂಗೆ ಎಲ್ಲಿಯೋ ಇರಕ್ಕಾವುತ್ತು ಅದು ಬೇರೆ ವಿಚಾರ!

ಸಣ್ಣ ಪುಟ್ಟ ವಿಚಾರಂಗೊಕ್ಕೆ ನಾವು ಮನಸಿನ ಸೋಲುಲೆ ಬಿಡುಲಾಗ .ಆತ್ಮ ಸಾಕ್ಷಿಯ ಬಿಡುಲಾಗ ಹೇಳುವ ಬುದ್ಧಿ ಮಾತಿನ ಈ ನುಸಿ ತಿಂದು ಜಾತಿ ಕೆಡುಲಾಗ ಹೇಳುವ ನುಡಿಕಟ್ಟು ತಿಳಿಸಿಕೊಡುತ್ತು.ಅಡಿಕೆಗೆ  ಹೋದ ಮಾನ ಆನೆ ಕೊಟ್ಟರೂ ಬಾರದು,ಆನೆ ಕದ್ದರೂ ಕಳ್ಳ ಅಡಿಕೆ ಕದ್ದರೂ ಕಳ್ಳ ಎಂಬ ಗಾದೆ ಮಾತುಗ ಕನ್ನಡ ಭಾಷೆಲಿ ಇದಕ್ಕೆ ಸಂವಾದಿಯಾಗಿ ಬಳಕೆಲಿ ಇದ್ದು
ನಿಂಗಳ ಪರಿಸರಲ್ಲಿಯೂ ಇದಕ್ಕೆ ಸಂವಾದಿಯಾಗಿ ಬಳಸುವ ನುಡಿಗಟ್ಟು ಇಕ್ಕು ಅಲ್ಲದಾ ? ಅದರ ತಿಳಿಸಿ ಕೊಡಿ ಆತಾ ? ನಮಸ್ಕಾರ ಮತ್ತೆ ಕಾಂಬ
ಡಾ.ಲಕ್ಷ್ಮೀ ಜಿ ಪ್ರಸಾದ