Sunday 21 March 2021

ಕೂರಂಡ ಬಗೆ - 60 ಗಿಳಿ ಬಾಗಿಲು( ಹವ್ಯಕ ನುಡಿಗಟ್ಟುಗಳು, ಗಾದೆಗಳು) @ ಡಾ.ಲಕ್ಷ್ಮೀ ಜಿ ಪ್ರಸಾದ್

 ಕೂರಂಡ ಬಗೆ


ಅವಕ್ಕೋ ಇಪ್ಒದರ ಹೇಳಿರೆ ನಮ್ಮತ್ತರೆ ವಿಪರೀಒ ಕೋಪ ಬಕ್ಕು .ನಮ್ಮತ್ತರೆ ಕೂರಂಡ ಬಗೆ ಮಾಡುಗು ಹೇಳಿ ಮೊನ್ನೆ ಅಮ್ಮ ಮಾತಿನ ನಡುವೆ ಹೇಳಿದ.

ಅದು ಸಮ..ಈ ಕೂರಂಡ ಬಗೆ ಹೇಳಿರೆ ಎಂತದು ? 

ಒಬ್ಬರ ಮಗಳು ಹೇಂಗೊ ಹೇಂಗೋ ಡ್ರೆಸ್ ಮಾಡುದು ,ಆರಾರೊಟ್ಟಿಂಗೋ ಫ್ರೆಂಡ್ಸಿಪ್ ಹೇಳಿಯೊಂಡು ಇರುಳು ಒಂಬತ್ತು ಗಂಟೆ ನಂತರದ ಸಿನೆಮಾಕ್ಕೆ ಹೋಪದು ಇತ್ಯಾದಿಗಳ ಬಗ್ಗೆ ಮಾತಾಡ್ತಾ ಇತ್ತಿದೆಯ.ಇದರ ಅವರ ಅಬ್ಬೆ ಅಪ್ಪಂಗೆ ಹೇಳುದು ಹೇಂಗೆ? 

ಹೇಳಿದರೆ ಮಗಳ ಮೇಲೆ ಅತೀವ ನಂಬುಗೆ ಇಪ್ಪೋರು ಹೊಟ್ಡೆಕಿಚ್ಚಿಲಿ ಹೇಳುದು ಹೇಳಿ ನಮಗೇ ತಿರುಗಿ ಬಿದ್ದರೆ ಹೇಳಿ ಹೆದರಿಕೆ ಎನಗೆ.

ಇದರ ಅಮ್ಮನತ್ತರೆ ಮಾತಿನ ನಡುವೆ ಅಮ್ಮನತ್ತರೆ ಹೇಳಿತ್ತಿದೆ.ಅಂಬಗ ಅಮ್ಮ ನಮಗೆ ಅವರ ಸಂಗತಿ ಬೇಡ.ಮತ್ತೆ ಅವು ಕೂರಂಡ ಬಗೆ ಮಾಡುಗು ಹೇಳಿದ.

ಅದಕ್ಕೆ ಸರಿಯಾಗಿ ಎಂಗಳ ಪೈಕಿಲಿ ಒಂದು ಸಂಗತಿ ನಡದ್ದು.

ಒಂದು ಕೂಸು ಸಮ್ಮಂಧಿಕರ ಮನೆಲಿದ್ದುಕೊಂಡು ಓದಿಯೊಂಡು ಇತ್ತು‌.ಅದು ಆರೊಟ್ಟಿಂಗೋ ಲವ್ ಹೇಳಿ ತಿರುಗುದು ಗೊಂತಾಗಿ ಅವು ಅದರ ಅಬ್ಬೆ ಅಪ್ಪಂಗೆ ತಿಳಿಸಿದವು.

ಅಷ್ಟಪ್ಪದ್ದೆ ಅಬ್ಬೆ ಅಪ್ಪ ಈ ಸಂಬಂಧಿಗಳ ಏಕ್ ಧಂ್ ಬೈದ್ದೇ ಬೈದ್ದು.ಬಡಿಯದ್ದದ್ದು ಅವರ ಪುಣ್ಯ.

ನಂತರ ಆ ಕೂಸಿಬ ಹಾಸ್ಟೆಲಿಲಿ ಹಾಕಿದವು..

ನಂತರದ ಕಥೆ ಹೇಳಿ ಸುಖವಿಲ್ಲೆ.

ಅಬ್ಬೆ ಅಪ್ಪನ ವಿರೋಧದ ನಡುವೆದೆ ಬೇರೆ ಧರ್ಮದದ ಹುಡುಗನ ಅದು ಮದುವೆ ಆತು.

ಇದು ನೆಂಪಾಗಿ ನಮಗೆ ಹೇಳುವ ಸಂಗತಿ ಬೇಡ ಹೇಳಿ ಬಿಟ್ಟೆಯ ಎಂಗ


ಆದರೆ ಅಮ್ಮ ಹೇಳಿದ ಕೂರಂಡ ಬಗೆ ಹೇಳುವ ನುಡಿಗಟ್ಟು ಎನ್ನ ಗಮನ ಸೆಳತ್ತು‌ .

ಕೂರಂಡ ಪಗೆ ಹೇಳಿರೆ ಏನಾದಿಕ್ಕು ? ಕ್ರೂರವಾದ ಪಗೆ/ ಹಗೆ ಆದಿಕ್ಕೂ ಹೇಳಿ ಎನಗನಿಸಿತ್ತು.ನಿಂಗಳ ಕಡೆಲಿದೆ ಈ ನುಡಿಗಟ್ಟಿನ ಬಳಕೆ ಇದ್ದಾ? ಇದ್ದರೆ ಅದರ ಅರ್ಥವ ತಿಳಿಸಿ ಆತಾ

@ಡಾ.ಲಕ್ಷ್ಮೀ ಜಿ ಪ್ರಸಾದ್