ಎಂಗಳಲ್ಲಿ ಅಮ್ಮಂಗೆ ಅಬ್ಬೆ ಹೇಳಿ ಹೇಳುದು .ಇತ್ತೀಚಿಗಂಗೆ ೩೦ -೩೫ ವರ್ಷಂಗ ಳಲ್ಲಿ ಅಬ್ಬೆಯ ಬದಲು ಅಮ್ಮ ಹೇಳುವ ಪದ ರೂಡಿ ಗೆ ಬೈಂದು .ಎನ್ನ ಅಪ್ಪ ಅಮ್ಮ ಎಲ್ಲ ಅವರ ಅಮ್ಮನ ಹೇಳಿರೆ ಎನ್ನ ಅಜ್ಜ್ಯಕ್ಕಳ ಅಬ್ಬೆ ಹೇಳಿಯೇ ದೆನಿಗೇಳುದು.ಬಹುಷ ಕನ್ನಡ ಭಾಷೆಯ ಪ್ರಭಾವಂದಾಗಿ ಅಬ್ಬೆ ಅಮ್ಮ ಆದ್ದು ಆದಿಕ್ಕು. ಈಗ ಇಂಗ್ಲೀಷಿನ ಪ್ರಭಾವಂದಾಗಿ ಅಮ್ಮ ಮಮ್ಮಿ ಆದ ಹಾಂಗೆ !
ಅದು ಏನೇ ಇರಲಿ ,ಎಂಗಳ ಕೋಳ್ಯೂರು ಸೀಮೆಲಿ ಅಮ್ಮಂಗೆ ಏಕವಚನ ಇಲ್ಲೆ .ಹಾಂಗೇಳಿ ಬಹುವಚನವೂ ಇಲ್ಲೆ.ಏಕವಚನ ಬಹುವಚನಂಗಳ ನಡುವಿಲಿ ಒಂದು ವಿಶಿಷ್ಟ ವಚನ ಇದ್ದು .ಆನು ಅದರ ಗೌರವ ವಚನ ಹೇಳಿ ದೆನಿಗೇಳಿದ್ದೆ .ವಿದ್ವಾಂಸರುಗ ಇದಕ್ಕೆ ಎಂತ ಹೇಳಿ ಹೇಳ್ತವು?ಇದು ಅವರ ಗಮನಕ್ಕೆ ಬೈಂದ ? ಹೇಳಿ ಎನಗೆ ಗೊಂತಿಲ್ಲೆ .
ಎಂಗಳ ಭಾಷೆಲಿ ಪುರುಷರಿಂಗೆ ಅವರವರ ಸ್ಥಾನಕ್ಕೆ ಅನುಗುಣವಾಗಿ ಏಕವಚನ ಬಹುವಚನ ಇದ್ದು .ಸಾಮಾನ್ಯವಾಗಿ ಅಪ್ಪ ಅಜ್ಜಂಗೆ , ಮಾವುಗಳಿಂಗೆ, ಮಾವನೋರಿಂಗೆ ಮತ್ತೆ ಗುರುಗೊಕ್ಕೆ ಬಹುವಚನ .ಮತ್ತೆ ಒಳುದೋರಿಂಗೆಲ್ಲ ಏಕವಚನವೆ ಇಪ್ಪದು .ಉದಾ -ಅಪ್ಪ ಬಂದವು .ಅಜ್ಜ ಬೈನ್ದವು ಇತ್ಯಾದಿ ಅಪ್ಪಂಗೆ ಕೂಡ ಕೆಲವು ಕಡೆ ಏಕವಚನ ಇದ್ದು . ಅಣ್ಣ ಮಾವ ಅಪ್ಪಚ್ಚಿ ತಮ್ಮ ಎಲ್ಲೊರಿಂಗು ಏಕವಚನ .ಉದಾ-ಅಣ್ಣ ಬಂದ ಮಾವ ಬಕ್ಕು ಇತ್ಯಾದಿ .
ಇನ್ನು ಹೆಮ್ಮಕ್ಕೊಗೆ ಪ್ರಾಣಿಗೊಕ್ಕೆ ಏಕವಚನ ಇಪ್ಪದು ಉದಾ-ಅದು (ಅವಳು )ಬಂತು, ಅಕ್ಕ ಬಂತು ,ನಾಯಿ ಹೋತು .ಇಲ್ಲಿ ಸ್ತ್ರೀಲಿಗ ಮತ್ತೆ ನಪುಂಸಕ ಲಿಂಗಂಗೊಕ್ಕೆ ಯಾವುದೇ ವ್ಯತ್ಯಾಸ ಇಲ್ಲೇ ಎರಡಕ್ಕೂ ಒಂದೇ ರೀತಿ ಏಕವಚನ .ಹೆಮ್ಮಕ್ಕಳಲ್ಲಿದೆ ಅ ಅತ್ತಿಯೋರು (ಗೆಂಡನ ಅಬ್ಬೆ ),ಅತ್ತೆಗಳು (ಹೆಂಡತಿಯ ಅಬ್ಬೆ ) ಇವಕ್ಕೆ ಬಹುವಚನ ಇದ್ದು . ಉದಾ-ಅತ್ತೆ ಬೈನ್ದವು ,ಹೋದವು ಇತ್ಯಾದಿ .ಒಳುದ ಹೆಮ್ಮಕ್ಕೊಗೆ ಏಕವಚನ ಉದಾ -ಚಿಕ್ಕಮ್ಮ ಬೈಂದು ,ಹೋಯಿದು ಇತ್ಯಾದಿ .
ಇದರ ನಡುಗೆ ಅಮ್ಮಂಗೆ ಅತ್ತಿಗೆಗೆ (ಅಣ್ಣನ ಹೆಂಡತಿ ) ಆನು ವಿಶಿಷ್ಟ ವಚನದ ಬಳಕೆ ಇದ್ದು .ಉದಾ-ಅಮ್ಮ ಬೈಂದ ,ಅಮ್ಮ ದೋಸೆ ತಿಂದಿದ .,ಅಮ್ಮ ಹೋಯಿದ .ಎಂಗಳ ಭಾಷೆಲಿ ಏಕವಚನ ಹೇಳುವಾಗ ಆ ಪದದ ಕಡೆಂಗೆ ಅನುನಾಸಿಕ ಇರ್ತು .ಉದಾ-ಆವಾ ಹೋಯಿದ ಹೇಳಿ ಹೇಳುವಾಗ ಕಡೆಯ ದ ದೊತ್ತಿನ್ಗೆ ಅನುನಾಸಿಕ ಇರ್ತು .ಆದರೆ ಅಮ್ಮ ಹೋಯಿದ ಹೇಳುವಗ ಕಡೆಂಗೆ ಅನುನಾಸಿಕ ಇಲ್ಲೆ .ಅದೇ ರೀತಿ ಪ್ರಶ್ನಾರ್ಥಕ ವಾಗಿದ್ದರೆ ಅಲ್ಲಿದೆ ಅಮ್ಮಂಗೆ ಸಂಬಂಧಿಸಿ ಕೇಳುವಗ ರಜ್ಜ ವ್ಯತ್ಯಾಸ ಇದ್ದು
ಉದಾ -ಅಮ್ಮ ಬೈನ್ದಳಾ ?ಅಮ್ಮ ಉಂಡಳಾ ?ಅಮ್ಮ ಒರಗಿದಳಾ ?.ಬೇರೆ ಹೆಮ್ಮಕ್ಕೊಗೆ ಹೇಳುವಗ ತಂಗೆ ಬೈಂದಾ ?ಅದು ಉಂಡತ್ತಾ ? ಹೇಳಿ ಇರ್ತು .
ಇಲ್ಲಿ ಎನ್ನ ಗಮನಕ್ಕೆ ಬಂದ ವಿಚಾರವ ನಿಂಗಳ ಮುಂದೆ ಮಡುಗಿದ್ದೆ .ನಿಂಗಳ ಅಭಿಪ್ರಾಯವ ತಿಳಿಸಿದರೆ ಸಂತೋಷ .
ಇನ್ನೊಂದರಿ ಕಾಂಬ
ನಮಸ್ಕಾರ
-ಲಕ್ಷ್ಮಿ ಜಿ ಪ್ರಸಾದ
ನಮಸ್ತೆ, ಇದೆಲ್ಲಾ ನಮ್ಮ ಹವ್ಯಕ ಭಾಷೆಯ ಗುಣಲಕ್ಷಣಗಳು. ಆದರೆ ಈ ಬೈಂದ , ಹೋದ ಅನ್ನುವುದನ್ನು ಸಾಗರ ಕಡೆ ವಚನಕ್ಕಿಂತ ಲಿಂಗಾಧಾರಿತ ಶಬ್ದಗಳಂತೆ ಬಳಸುವುದನ್ನು ಕೇಳಿದ್ದೇನೆ. ಅನುನಾಸಿಕ ಇದ್ದರೆ ಅದು ಗಂಡು, ಇಲ್ಲದಿದ್ದರೆ ಹೆಣ್ಣು !
ReplyDeleteನಮ್ಮ ಶಿರಸಿ ಕಡೆ ಸ್ತ್ರೀಗೆ ಅದು,ಬಂತು ಬಳಕೆಯಲ್ಲಿದೆ. ಸ್ತ್ರೀಯರಲ್ಲಿ ಸೊಸೆಯರು ಅತ್ತೆ ಮುಂತಾದ ಹಿರಿಯರಿಗೆ ಬಹುವಚನ ಬಳಸುತ್ತಾರೆ.
ಪ್ರತಿಕ್ರಿಯಿಸಿದ್ದಕ್ಕೆ ನಿಮ್ಮ ಬೆಂಬಲಕ್ಕೆ ಧನ್ಯವಾದಂಗ
Delete