Sunday 14 July 2019

ಗಿಳಿಬಾಗಿಲು :ಹವ್ಯಕ ನುಡಿಗಟ್ಟು 58 ಹೆಜ್ಜೆಲಿ ಬಿದ್ದ ನೆಳವಿನ ಹಾಂಗೆ © ಡಾ.ಲಕ್ಷ್ಮೀ ಜಿ ಪ್ರಸಾದ

ಹೆಜ್ಜೆಲಿ ಬಿದ್ದ ನೆಳವಿನ ಹಾಂಗೆ
ಇದೊಂದು ಹವ್ಯಕ ಭಾಷೆಲಿ ಬಳಕೆಲಿ ಇಪ್ಪ ಅಪರೂಪದ ನುಡಿಗಟ್ಟು. ತುಂಬಾ ನಿದಾನವಾಗಿ ಕೆಲಸ ಮಾಡುವೋರ ಬಗ್ಗೆ ,ಆಸಕ್ತಿ ಇಲ್ಲದ್ದೆ ಬೇಕಾ ಬೇಡವಾ ಹೇಳುವ ಹಾಂಗೆ ಇಪ್ಪೋರ ಬಗ್ಗೆ ಬಳಸುವ ಮಾತಿದು.
ಯಾವುದೇ ಕೆಲಸ ಮಾಡುವಗಲೂ ನಮಗೆ ಆಸಕ್ತಿ ಶ್ರದ್ಧ  ಬೇಕು.ಅದಿಲ್ಲದ್ದರೆ ಆ ಕೆಲಸವ ಮಾಡುವವ ನಿದಾನಕ್ಕೆ ಬೇಜವಾಬ್ದಾರಿಲಿ ಮಾಡುತ್ತ.ಅದರ ಬೇಗ ಮುಗಿಸಕ್ಕು ಹೇಳುವ ಉದ್ದೇಶ ಇದ್ದ ಹಾಂಗೆ ಕಾಣ್ತಿಲ್ಲೆ. ನಿದಾನಕ್ಕೆ ಆ ಕಡೆ ಈ ಕಡೆ ಗೆಬ್ಬಾಯಿಸಿಕೊಂಡು ಮಾಡುತ್ತಾ ಇರ್ತವು‌.ಅಂತೋರ ಬಗ್ಗೆ ವಿವರುಸುವಗ ಅದು ಎಂತ ಚುರುಕಿಲ್ಲೆ ಯಾವ ಕೆಲಸಲ್ಲೂ ಹಿಡಿತ ಇಲ್ಲೆ ಶ್ರದ್ಧೆ ಇಲ್ಲೆ.ಹೆಜ್ಜೆಲಿ ಬಿದ್ದ ನೆಳವಿನ ಹಾಂಗೆ ಇದ್ದು ಹೇಳಿ ಹೇಳ್ತವು.
ಹೆಜ್ಜೆ ಅಂಟು ಅಂಟಾಗಿ ಇಪ್ಪ ಕಾರಣ ನೆಳವು ಹೆಜ್ಜೆಗೆ ಬಿದ್ದರೆ ಅದಕ್ಕೆ ಬೇಗ ಬೇಗ ಹೋಪಲೆ ಎಡ್ತಿಲ್ಲೆ ಅಲ್ಲದ್ದೆ ನಡು ನಡುವೆ ಅದು ಹೆಜ್ಜೆ ತಿಂತುದೆ ಹಾಂಗಾಗಿ ಅದಕ್ಕೆ ಬೇಗ ಹೆರ ಬಪ್ಪ ಗುರಿ ಇದ್ದ ಹಾಂಗೂ ಕಾಣ್ತಿಲ್ಲೆ ಅಲ್ಲದ್ದೆ ಬೇಗ ಹೋಪಲೆ ಎಡ್ತಿಲ್ಲೆ ಹಾಂಗಾಗಿ ಚುರುಕು ಇಲ್ಲದ್ದೋರ ಬಗ್ಗೆ ಈ ಮಾತಿನ ಬಳಕೆ ಮಾಡುತ್ತವು.
© ಡಾ.ಲಕ್ಷ್ಮೀ ಜಿ ಪ್ರಸಾದ

ಗಿಳಿಬಾಗಿಲು : ಹವ್ಯಕ ನುಡಿಗಟ್ಟು 57 ಬೀಲ‌ ಮಡ್ಚಿ ಕೂಪದು - ಡಾ.ಲಕ್ಷ್ಮೀ ಜಿ ಪ್ರಸಾದ

ಬೀಲ‌ ಮಡ್ಚಿ ಕೂಪದು
ಮಾತಿನ ನಡುವೆ ನಾವು ಇಂತ ಸುಮಾರು ಉಪಮೆಗಳ ಗಾದೆಗಳ ಬಳಸುತ್ತು.ಅಂಬಗಳೇ ಗಮನಿಸಿ ಬರದು ಮಡುಗಿರೆ ಆತು .ಇಲ್ಲದ್ದರೆ ಮರತ್ತೇ ಹೋವುತ್ತು.ಹಾಂಗೆ ಯಾವಗಳೋ ಮಾತಿನ ನಡುವೆ ಗಳಸಿದ ಬೀಲ ಮಡ್ಚಿ ಕೂದ ಹೇಳುವ ಮಾತಿನ ಬರದು ಮಡುಗಿತ್ತಿದೆ.
ಎಂತದು ಇದು ಬೀಲ ಮಡ್ಚಿ ಕೂಪದು ಹೇಳಿರೆ ? ಸಾಮಾನ್ಯವಾಗಿ ಅಧಿಕ ಪ್ರಸಂಗಿಗಳ ಬಗ್ಗೆ ಈ ಮಾತಿನ ಗಳಸುತ್ತವು.
ಯಾವುದೂ ಒಳ್ಳೆಯ ಕೆಲಸಕ್ಕೆ ಹೆರಟಪ್ಪಗ ಕೆಲವು ಜನಂಗ ಅಧಿಕ ಪ್ರಸಂಗಿಗ ಅಡ್ಡಕಾಲು ಹಾಕುಲೆ ಹೆರಡುತ್ತವು.ತಾವು ಏನೋ ಮಹಾ ಹೇಳುವ ಹಾಂಗೆ ಏನೋ ತಕರಾರು ಮಾಡುತ್ತವು.ಅಷ್ಟೊತ್ತಿಂಗೆ ಅಲ್ಲಿಪ್ಪೋರು ಆರಾದರೂ ಸರಿಯಾದ ಆಧಾರ ಹಿಡಿದು ರಜ್ಜ ಗಟ್ಟಿಯಾಗಿ ಖಂಡಿಸಿದರೆ ಇಂತೋವು ಬಾಯಿಮುಚ್ಚಿ ಕೂರ್ತವು.ಇಂತಹ ಸಂದರ್ಭವ ವಿವರುಸುವಗ ಮತ್ತೆ ಅವ ಬೀಲ ಮಡ್ಚಿ ಕೂದ ಹೇಳಿ ಹೇಳುತ್ತವು.
ನಾಯಿಗ ಇನ್ನೊಂದು ನಾಯಿಯ ಕಂಡಪ್ಪಗ ಶುರುವಿಂಗೆ ಕೊರದು ಜಗಳಕ್ಕೆ ಹೋವುತ್ತವು.ಎದುರಣ ನಾಯಿ ಜೋರಿಂದು ಹೇಳಿ ಆದರೆ ಮತ್ತೆ ಜಗಳಕ್ಕೆ ಹೋದ ನಾಯಿ ಬೀಲ ಮಡ್ಚಿ ಒಳಂಗೆ ಹಾಕಿ ಹೋವುತ್ತು.ಸುಮ್ಮ ಸುಮ್ಮನೇ ಕಾಲು ಕೆರದು ಜಗಳಕ್ಕೆ ನಿಂದೋವು ,ಅಧಿಕ ಪ್ರಸಂಗ ಮಾಡುವೋವು ಎದುರಣೋವು ಹೆಚ್ಚು ಬಲಿಷ್ಠರು ಹೇಳಿ ಗೊಂತಪ್ಪದ್ದೆ ಬಾಯಿ ಮುಚ್ಚಿ ಕೂರ್ತವು.ಅದಯ ನಾಯಿಗ ಬೀಲ‌ ಮಡಚ್ಚಿ ಕೂಪದಕ್ಕೆ ಸಮಾನವಾದ್ದು .ಹಾಂಗಾಗಿ ಇಂತಹ ಸಂದರ್ಭಲ್ಲಿ ಬೀಲ‌ಮಡ್ಚಿ ಕೂದ ಹೇಳುವ ಮಾತಿನ ಬಳಸುತ್ತವು.ಈ ಬಗ್ಗೆ ನಿಂಗಳ ಅಭಿಪ್ರಾಯಕ್ಕೆ ಸ್ವಾಗತ‌
- ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು, ಸರ್ಕಾರಿ ಪಿಯು ಕಾಲೇಜು,ನೆಲಮಂಗಲ ,ಬೆಂಗಳೂರು ಗ್ರಾಮಾಂತರ ಜಿಲ್ಲೆ

ಗಿಳಿ ಬಾಗಿಲು ಹವ್ಯಕ ನುಡಿಗಟ್ಟು 56 ಮೇಲೆ ಕಂಡಷ್ಟು ಅಡೀಲೂ ಇದ್ದು © ಡಾ.ಲಕ್ಷ್ಮೀ ಜಿ ಪ್ರಸಾದ

ಗಿಳಿ ಬಾಗಿಲು ಹವ್ಯಕ ನುಡಿಗಟ್ಟು 56
ಮೇಲೆ ಕಂಡಷ್ಟು ಅಡೀಲೂ ಇದ್ದು
ಇಂದು ಅಮ್ಮನತ್ತರೆ ಮಾತಾಡುತ್ತಾ ಇಪ್ಪಗ ಒಬ್ಬರ ವಿಚಾರ ಬಂತು.ಅವರ ಬಗ್ಗೆ ಮಾತಾಡುತ್ತಾ ಇಪ್ಪಗ ಅವು ಕಂಡಾಂಗೆ ಅಲ್ಲ ,ಸಾಮಾನ್ಯಲ್ಲಿ‌ಇಲ್ಲೆ .ಎದುರಂದ ಇಪ್ಪ ಹಾಂಗೆ ಎಲ್ಲೊರು ಹಿಂದಂದದೆ ಇರ್ತವಿಲ್ಲೆ .ಮೇಲೆ ಕಂಡಷ್ಟು ಅಡೀಲೂ‌ ಇರ್ತು ಹೇಳುದು ಸತ್ಯ ಹೇಳುವ ಮಾತು ಬಂತು.ಅಂಬಗ ಇದೊಂದು ನಮ್ಮ ಭಾಷೆಯ ಅಪರೂಪದ ಪ್ರಯೋಗ ಹೇಳುದು ಎನ್ನ ಗಮನಕ್ಕೆ ಬಂತು.
ಮೇಲೆ ಕಂಡಷ್ಟು ಅಡೀಲೂ ಇದ್ದು ಹೇಳಿರೆ ಮನುಷ್ಯರು ಮೇಲ್ನೋಟಕ್ಕೆ ಕಂಡ ಹಾಂಗೆ ಇರ್ತವೂ ಹೇಳಿ‌ ಇಲ್ಲೆ,ಕೆಲವು ಜೆನಂಗಳ ಒಳ ಮನಸ್ಸು ಬೇರೆಯೇ ಇರ್ತು .ಮೇಲಂದ ಕಾಂಬಗ ಒಳ್ಳೆಯ ನಯ ವಿನಯ ಉದಾರತೆಯ , ಒಳ್ಳೆತನದ ಮಾತು ನಡತೆಗ ಇದ್ದರೂ  ಕೆಲವು ಜೆನಂಗ ಒಳಂದ ಬೇರೆಯೇ ಇರ್ತವು ಹೇಳುವ ಅರ್ಥ.
ಅದರೆ ಅಕ್ಷರಶಃ ಅರ್ಥ ಎಂತ ಆದಿಕ್ಕು ? ಯಾವುದರ ಹೋಲಿಸಿ ಈ ಮಾತು ಬಂದಿಕ್ಕು ?
ಹಡಗು ಮೇಲ್ಭಾಗಲ್ಲಿ ಕಂಡಷ್ಟೇ ನೀರಿನ ಒಳದೆ ಇರ್ತು.ಅದರ ಮೇಲ್ಭಾಗ ಮಾತ್ರ ನೋಡಿ ಅದರ ಗಾತ್ರವ ನಿರ್ಣಯಿಸುಲೆ ಸಾಧ್ಯ ಇಲ್ಲೆ.ಮೇಲೆ ಕಂಡಷ್ಟು ಅಡಿಲಿದೆ ಇದ್ದು ಹಾಂಗೆಯೇ ಮನುಷ್ಯನ ವ್ಯಕ್ತಿತ್ವವ ಕೂಡ ಸುಲಭಕ್ಕೆ ನಿರ್ಣಯಿಸುಲೆ ಸಾಧ್ಯ ಇಲ್ಲೆ, ಹೇಳುವ ಅರ್ಥಲ್ಲಿ ಈ ಮಾತು ಬಳಕೆಗೆ ಬಂದಿಕ್ಕು ಹೇಳಿ ಎನಗೆ ಅನ್ಸಿತ್ತು ,ನಿಂಗಳ ಅಭಿಪ್ರಾಯಂಗೊಕ್ಕೆ ಸ್ವಾಗತ
© ಡಾ. ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು ,ನೆಲಮಂಗಲ