Thursday, 21 August 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹೆರಟರೆ ಅಕ್ಕಾ ?-ಡಾ.ಲಕ್ಷ್ಮೀ ಜಿ ಪ್ರಸಾದಆನೆ ಲದ್ದಿ ಹಾಕುತ್ತು ಹೇಳಿ ಮೆರು ಹೆರಟರೆ ಅಕ್ಕಾ ?

ಮೊನ್ನೆ ಎಂಗಳ ಪಕ್ಕದ ಮನೆ ಹೆಮ್ಮಕ್ಕ ಒಂದು ದಾರುಣ ಸುದ್ದಿ ಹೇಳಿದವು .ಅವರ ಆಫೀಸ್ ಲಿ ಕೆಲಸ ಮಾಡುವ ಒಬ್ಬ ಆಫೀಸರ್ ಮತ್ತೆ ಅವನ ಹೆಂಡತಿ ಆತ್ಮ ಹತ್ಯೆಗೆ ಯತ್ನಿಸಿದ  ಬಗ್ಗೆ ಹೇಳಿದವು .ಇಂದಿನ ದಿನಂಗಳಲ್ಲಿ ಆತ್ಮ ಹತ್ಯೆ ಹೆಚ್ಚಾವುತ್ತಾ ಇದ್ದು .ಕೆಲವು ಸ್ವಯಂಕೃತ ಅಪರಾಧಗಳ ಕಾರಣಕ್ಕೆ ಕೆಲವು ಬೇರೆಯೋರ ಉಪದ್ರ ತಾಳುಲೆ ಎಡಿಯದ್ದೆ ಇನ್ನು ಕೆಲವು ಸರಿಯಾದ ಕೆಲ್ಸ, ಸಂಬಳ ಸಿಕ್ಕದ್ದ ಬಗ್ಗೆ .ಪರೀಕ್ಷೇಲಿ ಫೈಲ್ ಆದ ಬಗ್ಗೆ .ಹೀಂಗೆ ದಿನ ನಿತ್ಯ ಇಂಥ ವಿಚಾರವ ನಾವು ಕೇಳುತ್ತು .ಅದರಲ್ಲಿ ಸುಮಾರು ಕೇಸ್ ಗ ಈ ದಂಪತಿಗಳ ಹಾಂಗೆ ಆತ್ಮ ಹತ್ಯೆ ಮಾಡಿಕೊಂಡೋವು ಇದ್ದವು .

ಈ ಗೆಂಡ ಹೆಂಡತಿಗೊಕ್ಕೆ ಇಬ್ರಿಂಗು ಒಳ್ಳೆಯ  ಕೆಲಸ ಇದ್ದು.ಇವು ಪ್ರಾಮಾಣಿಕ ಕೆಲಸ ಗಾರರು ಕೂಡ .ಫೈಲ್ ಮುಟ್ಟಕ್ಕಾರೆಮೊದಲು ,ಮುಟ್ಟಿದ್ದಕ್ಕೆ ನಂತರ ಹೇಳಿ ಪೈಸೆ ಎಳಕ್ಕೊಂಬ ಜೆನಂಗ ಅಲ್ಲ .ಸಾಮಾನ್ಯವಾಗಿ ಲೆಂಚ ತೆಕ್ಕೊಂಡು ಭ್ರಷ್ಟಾಚಾರ ಮಾಡಿ ಸಿಕ್ಕು ಹಾಕಿಕೊಂಡು ಅನೇಕ ಜನಂಗ ಅತ್ಮಹತ್ಯೆಯತ್ತ ಮೋರೆ ಮಾಡುದು ಅಲ್ಲಲ್ಲಿ ಕಂಡು ಬತ್ತು .ಭ್ರಷ್ಟಾಚಾರ ಮಾಡಿರೆ ಅದರ ಅರಗಿಸಿಕೊಂಬದು ಕೂಡ ಸುಲಭದ ವಿಚಾರ ಅಲ್ಲನ್ನೇ!

ಆದರೆ ಇವರದ್ದು ಈ ವಿಚಾರಕ್ಕೆ ಮಾಡಿಕೊಂಡ ಆತ್ಮ ಹತ್ಯೆಯಲ್ಲ .ಇವರಲ್ಲಿ ಹೆಂಡತಿಯ ತಂಗೆಯ ಗೆಂಡ ದೊಡ್ಡ ಬುಸಿನೆಸ್ ಮ್ಯಾನ್ .ತುಂಬಾ ದೊಡ್ಡ ವ್ಯವಹಾರ ಇದ್ದು ಅಡ.ಅವರತ್ರೆ ಏಳೆಂಟು ಬಂಗಲೆ ,ಕಾರುಗ ಎಲ್ಲ ಇದ್ದಡ.ಪ್ರಾಮಾಣಿಕವಾಗಿ ಕೆಲಸ ಮಾಡುವ ಸರ್ಕಾರಿ ಕೆಲಸಗಾರರಿಂಗೆ ಇಷ್ಟೆಲ್ಲಾ ಆದಾಯ ಇಲ್ಲೆ.ಈ ಗೆಂಡ ಹೆಂಡತಿಗ ಅವರ ಹೆಂಡತಿಯ ತಂಗೆಗೆ ಇಪ್ಪ ಹಾಂಗೆ ಸೀರೆ ಚಿನ್ನ ,ಮನೆ ವಾಹನಂಗ ಆಯಕ್ಕು ಹೇಳಿ ವಿಪರೀತ ಸಾಲ ಮಾಡಿ ದೊಡ್ಡ ಬಂಗಲೆ, ಇಪ್ಪತ್ತೈದು ಲಕ್ಷದ  ಕಾರು ತೆಗದ್ದವು .ಮತ್ತೆ ಸಾಲ ಕೊಡುಲೆ ಎಡಿಯದ್ದೆ ಆತು .ಸಾಲಗಾರರೆಲ್ಲ ದಿನ ನಿತ್ಯ ಪೈಸೆ ಹಿಂದೆ ಕೊದುಲೇ ಹೇಳುಲೆ ಸುರು ಮಾಡಿದವು .ಇನ್ನೊಂದೆಡೆ ಬಾಂಕ್ ಗಳಿಂದ ನೋಟೀಸ್ ಬಂತು .

ಇಷ್ಟಪ್ಪಗ ಇದರೆಲ್ಲದರ ನಿಭಾಯಿಸುಲೆ ಎಡಿಯದ್ದೆ  ಆ ದಂಪತಿಗ ಸಾವಿನತ್ತ ಮುಖ ಹಾಕಿದವು .

ಅಂಬಗ ಎನಗೆ ಇಂಥ ಸಂದರ್ಭಕ್ಕೆ ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹಾಕುಲೆ ಹೋದರೆ ಅಕ್ಕ ?ಹೇಳುವ ಮಾತು ಬಳಕೆಲಿ ಇಪ್ಪದು ಎನಗೆ ನೆನಪಾತು .ಹಾಸಿಗೆ ಇದ್ದಷ್ಟು ಕಾಲು ಚಾಚು ಹೇಳುವ ಗಾದೆ ಮಾತು ಇದ್ದು ಅದಕ್ಕೆ ಪ್ರತಿಯಾಗಿ ಹಾಸಿಗೆಯನ್ನೇ ದೊಡ್ಡಕ್ಕೆ ಹೊಲಿಸು ಹೇಳುವ ಆಧುನಿಕ ಚಿಂತನೆಗಳೂ ಇದ್ದು ,ಆದರೆ ಎಲ್ಲದಕ್ಕೂ ಒಂದು ಮಿತಿ ಇರಡದ.ಅವರವರ ಸಾಮರ್ಥ್ಯ ನೋಡಿಗೊಳ್ಳಡದ?

ಆನೆಗೆ ದೊಡ್ಡ ಪ್ರಮಾಣದ ಲದ್ದಿ ಹಾಕುಲೆ ಎಡಿತ್ತು .ಅದು ಹಾಂಗೆ ತಿಂತು ,ಕೆಲಸ ಮಾಡುತ್ತು ಕೂಡ !ಆದರೆ ಹುಲ್ಲಿನ ಕೊಡಿ ಕೊಡಿ ತಿಂಬ ಮೆರು (ಮೊಲ ) ಅನೆ ಹಾಂಗೆ ಲದ್ದಿ ಹಾಕುಲೇ ಹೆರಟ್ರೆ ಅದು ಅಸಾಧ್ಯವಾದ ವಿಚಾರ .

ನಮ್ಮ ಸಾಮರ್ಥ್ಯವ ಮೀರಿದ ಕೆಲಸಕ್ಕೆ ಕೈ ಹಾಕುವ ಸಂದರ್ಭಲ್ಲಿ ಬುದ್ಧಿ  ಮಾತಾಗಿ  ಈ ಹವ್ಯಕ ಪಡೆ ನುಡಿ ಬಳಕೆಲಿ ಇದ್ದು .ಸಿಂಹ ಆನೆಯ ಎಳವಲೆ ಹೆರಟ ಹಾಂಗೆ ಹೇಳಿ ಅರ್ಥ ಬಪ್ಪ ಸಂಸ್ಕೃತದ ನುಡಿಗಟ್ಟು ಸಂಸ್ಕೃತ ಭಾಷಾ ಸಾಹಿತ್ಯಲ್ಲಿ ಬಳಕೆಲಿ ಇದ್ದು .ಸಿಂಹ ಕ್ಕೆ ಆನೆಯ ಕೊಲ್ಲುಲೆ ಎಡಿಗು ಹಾಂಗೆ ಹೇಳಿ ಎಳಕ್ಕೊಂಡು ಹೊಪಲೆ ಹೆರಟ್ರೆ ಅದು ಶಕ್ತಿ ಕುಂದಿ ಸಾಯ್ತು ಹೇಳುವ ಕಥೆಯ ಹೇಳಿಕ್ಕಿ ಈ ಮಾತಿನ ಅರ್ಥ . ಅದೇ ರೀತಿಯ ಅರ್ಥವ” ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹೆರಟರೆ ಅಕ್ಕಾ ?”ಹೇಳುವ ಹವ್ಯಕ ನುಡಿ ಕಟ್ಟು ಕೊಡುತ್ತು .

ಸಾಮರ್ಥ್ಯಕ್ಕೆ ಮೀರಿದ ಕೆಲಸಕ್ಕೆ ಕೈ ಹಾಕಿದರೆ ಸೋಲಕ್ಕಾವುತ್ತು .ಹಾಂಗಾಗಿ ನಮ್ಮ ಇತಿ ಮಿತಿಯ ನೋಡಿಕೊಂಡು ಕೆಲಸ ಮಾಡಕ್ಕು .ಆರತ್ರೋ ಕಾರು ಬಂಗಲೆ ಇದ್ದು ಹೇಳಿ ಅತಿಯಾಗಿ ಸಾಲ ಮಾಡಿ ಜೀವನ ಇಡೀ ಅದರ ಬೂಟುಲೆ ಹೆಣಗಾಡಕ್ಕಾದ ಅಗತ್ಯ ಬತ್ತು .ನೆಮ್ಮದಿಯ ಕಳಕ್ಕೊಂಡು ಬದುಕ್ಕಾವುತ್ತು ಹೇಳುವ ಎಚ್ಚರಿಕೆ ಕೊಡುವ ನುಡಿಗಟ್ಟು ಇದು

Friday, 8 August 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )- ಕಣ್ಣು ನೆತ್ತಿಗೆ ಹಾರಿದ್ದು

ಒಂದು ಡೆಡ್ ಲ್ಯಾಂಗ್ವೇಜ್ ನ ( ?! )ಕಲ್ತು   ಲೈವ್ ಬರಹಗಾರ್ತಿಯಾದೆ.ಅಪ್ಪು ಎನ್ನ ಬರವಣಿಗೆಗೆ ಮೂಲ ಪ್ರೇರಣೆ ಸಂಸ್ಕ್ರತದ್ದೆ ,ಎಂತಕೆ ಹೇಳಿ ಇನ್ನೊಂದು ದಿನ ಹೇಳುತ್ತೆ .ಸಂಸ್ಕೃತ ಮೃತ ಭಾಷೆ ಅಲ್ಲ ,ಆದರೆ ಅಭಿಮಾನ ಹೀನರು .ಪೂರ್ವಾಗ್ರಹ ಪೀಡಿತರು ಬದುಕಿಯೂ ಮೃತ ಆವುತ್ತವು ಅಷ್ಟೇ !

ಮೊನ್ನೆಯಷ್ಟೇ ಸಂಸ್ಕೃತ ದಿನ ಕಳುತ್ತು ಅಂಬಗ ಎನಗೆನೆನಪಾದ ಒಂದು ಮಾತು ಮತ್ತು ಅದಕ್ಕೆ ಸಂಬಂಧಿಸಿದ ಅನುಭವಕ್ಕೆ ಬಂದ  ಒಂದು ನುಡಿಗಟ್ಟು "ಕಣ್ಣು ನೆತ್ತಿಗೆ ಹಾರಿದ್ದು"
ಕಣ್ಣು ನೆತ್ತಿಗೆ ಹಾರಿದ್ದು ಹೇಳುವ ಮಾತಿನ ಆನು ಸುಮಾರು ಸರ್ತಿ ಅವು ಇವು ಹೇಳುದರ ಕೇಳಿತ್ತಿದೆ.ಆದರೆ ನಿಜಕ್ಕೂ ಕಣ್ಣು ನೆತ್ತಿಗೆ ಹಾರುದುಹೇಳಿರೆ ಎಂತ ಹೇಳಿ ಎನಗೆ ನೋಡಿ ಗೊಂತಿತ್ತಿಲ್ಲೆ.
ಕಳುದ ವರ್ಷ ಒಂದು ವಿದ್ಯಾ ಸಂಸ್ಥೆಗೆ ವಿಶೇಷ ಉಪನ್ಯಾಸ ಕೊಡುಲೆ ಹೋಗಿತ್ತಿದೆ. ಕಾರ್ಯಕ್ರಮಕ್ಕೆ ಮೊದಲು ಬಂದ ಅತಿಥಿಗೊಕ್ಕೆ ಸಣ್ಣ ಉಪಹಾರ ವ್ಯವಸ್ಥೆ ಮಾಡಿತ್ತಿದವು .ಅಲ್ಲಿ ಒಬ್ಬ ಊಟೋಪಚಾರ ವ್ಯವಸ್ಥೆಯ ವಹಿಸಿಕೊಂಡಿದ್ದ ವ್ಯಕ್ತಿಯ ನೋಡುವಾಗ ಅವಂಗೆ ಏನೋ ಗೊಂದಲ ಇದ್ದ ಹಾಂಗೆ ಅನಿಸಿಕೊಂಡು ಇತ್ತು .ಅವನ ಎಲ್ಲಿಯೋ ನೋಡಿದ್ದೆ ಹೇಳಿ ಅನುಸ್ತಾ ಇತ್ತು ಎನಗೆ.ಅವ ಹತ್ತರೆ ಬಂದು ಮುಖ್ಯಸ್ಥರಿಂಗೆ ನಮಸ್ಕಾರ ಮಾಡಿದ.

ಅಷ್ಟಪ್ಪಗ ಎನ್ನ "ಇವರು ಡಾ.ಲಕ್ಷ್ಮೀ ಜಿ ಪ್ರಸಾದ್ ಗೊತ್ತಲ್ವ ಬರಹಗಾರಾರು ,ಸಂಶೋಧಕರು.ಇವತ್ತಿನ ಅಥಿತಿಗಳು ಹೇಳಿ ಪರಿಚಯಿಸಿಕ್ಕಿ ಅವನ ಆ ಕಾಲೇಜ್ ಲಿ ಅವ ಎಲೆಕ್ಟ್ರಾನಿಕ್ಸ್ ಲೆಕ್ಚರರ್ ಆಗಿದ್ದ ಹೇಳಿ ಪರಿಚಯ ಮಾಡಿ ಕೊಟ್ಟವು ಅಲ್ಲಿ .ನಂತರ ಆನು ಕಾರ್ಯಕ್ರಮ ಆಗಿ ಹೆರಡುವಾಗ ಅವ ಬಂದು ಎನ್ನತ್ತರೆ ಬಂದು ನೀವು ದಕ್ಷಿಣ ಕನ್ನಡದವರ ? ಹವ್ಯಕರ ?ಹೇಳಿ ಕೇಳಿದ.ಅಪ್ಪ್ಪು ಹೇಳಿ ಹೇಳಿದೆ .ನಿಂಗಳ ಎಲ್ಲಿಯೋ ನೋಡಿದ್ದೆ ಹೇಳಿ ಅನ್ಸುತ್ತು ಹೇಳಿದ.ಈ ಮಾತಿನ ಎನಗೆ ತುಂಬಾ ಜನಂಗ ಹೇಳುತ್ತವು .ಪತ್ರಿಕೆಗಳಲ್ಲಿ ಲೇಖನ ಬಪ್ಪಗ ಕೆಲವು ಸರ್ತಿ ಎನ್ನ ಫೋಟೋವೂ ಬತ್ತನ್ನೇ!ಅದರ ನೋಡಿದೊರಿಂಗೆ ಎನ್ನ ಕಾಂಬಗ ಎಲ್ಲೋ ನೋಡಿದ ಹಾಂಗೆ ಅನ್ಸುದು ಸಹಜ .ಹಾಂಗೆ ಇವಂಗೆ ಎನ್ನ ನೋಡಿದ ಹಾಂಗೆ ಅನ್ಸುದು ಆಡಿಕ್ಕು ಹೇಳಿ ಭಾವಿಸಿದೆ ಆನು.

ಮತ್ತೆ ನಿಂಗಳ ಸ್ವಂತ ಊರು ಯಾವುದು ಕೇಳಿದ .ಹೇಳಿದೆ ಆನು .ಅಷ್ಟಪ್ಪಗ ಅವಂಗೆ ಆನು ಆರು ಹೇಳಿ ಅವಂಗೆ ಗೊಂತಾತು.ಅವ ಆರು ಹೇಳಿ ಪರಿಚಯ ಹೇಳಿದ ಎನಗೂ ಅವನ ಈ ಹಿಂದೆ ಎಲ್ಲಿ ನೋಡಿದ್ದು ಹೇಳಿ ನೆನಪಾತು.

ಎಂಗಳ ಮನೆ (ಪ್ರಸಾದ್ ನ ಮನೆ) .ಹತ್ರ ಅವನ ಮನೆ ಇತ್ತು .ಮದುವೆ ಆದ ಹೊಸತರಲ್ಲಿ ಎಂಗಳ ಒಂದು ಊಟಕ್ಕೆ/ ಸಮ್ಮಾನಕ್ಕೆ ದೆನಿಗೇಳಿತ್ತಿದವು ಇವನ ಅಬ್ಬೆ ಅಪ್ಪ .ಹಾಂಗೆ ಅಲ್ಲಿಗೆ ಆನು ಹೋದಿಪ್ಪಗ ಇವನತ್ರೆ ಮಾತಾಡಿದ್ದೆ .ಆ ಸಮಯಲ್ಲಿ ಆನು ಮದುವೆಯ ನಂತರ ಕಲಿತ್ತಾ ಇಪ್ಪದು ಒಂದು ಊರಿಂಗೆ ಒಂದು ಮಾತನಾಡಿಕೊಂಬ ಸುದ್ದಿ ಆಗಿತ್ತು .ಅಂಬಗ ಇವ ಜಸ್ಟ್ ಇಂಜಿನೀರಿಂಗ್ ಗೆ ಸೇರಿದ್ದಷ್ಟೇ .ಇನ್ನು ಕ್ಲಾಸ್ ಸುರು ಆಗಿತ್ತಿಲ್ಲೆ .ಎನ್ನ ಡಿಗ್ರಿ ಮುಗುದು ಆನು ಸಂಸ್ಕೃತ ಎಂ. ಎ ಗೆ ಸೇರುವ ಅಂದಾಜಿಲಿ ಇತ್ತಿದೆ.(ಆನು ಬಿಎಸ್ಸಿ ಮಾಡಿದ್ದು ಆದರೆ ಎನಗೆ ಲ್ಯಾಬ್ ಅಲರ್ಜಿ ಸಮಸ್ಯೆ ಕಾಣಿಸಿಕೊಂಡ ಕಾರಣ ಎನಗೆ ಕೆಮಿಸ್ಟ್ರಿ ಎಂ.ಎಸ್ಸಿ ಮಾಡುಲೆ ಸಾಧ್ಯ ಇತ್ತಿಲ್ಲೆ.ಫಿಸಿಕ್ಸ್ ಮತ್ತೆ ಮಾಥ್ಸ್ ಎನಗೆ ಇಂಟರೆಸ್ಟ್ ಇತ್ತಿಲ್ಲೆ.ಸಂಸ್ಕೃತಲ್ಲಿ ಆಸಕ್ತಿ ಇತ್ತು .ಹಾಂಗಾಗಿ ಆನು ಸಂಸ್ಕೃತ ಎಂ.ಎ ಮಾಡಿದ್ದು ಆನು)
ಆ ಸಮಯಲ್ಲಿ ಇವನ ಅಬ್ಬೆ ಎನ್ನತ್ರೆ ಮುಂದೆ ಓದುಲೆ ಇದ್ದ ಕೇಳಿದವು .ಇದ್ದು ಹೇಳಿದೆ ಅಂಬಗ ಎಂತರ ಓದುದು ಹೇಳಿ ಅಲ್ಲಿ ಕೇಳಿದವು .ಆನು ಕಟೀಲಿಲಿ ಸಂಸ್ಕೃತ ಎಂ ಎ ಗೆ ಸೇರುದು ಹೇಳಿದೆ

ಅಂಬಗ ಅಲ್ಲಿಯೇ ಇದ್ದ ಇವ ಎನ್ನತ್ರೆ ಕೇಳಿತ್ತಿದ.ಒಂದು ಡೆಡ್ ಲ್ಯಾಂಗ್ವೇಜ್ ನ ಓದಿ ಎಂಥ ಪ್ರಯೋಜನ ಹೇಳಿ .ಅಷ್ಟಪ್ಪಗ ಆನು ನೀನು ಇಂಜಿನೀರಿಂಗ್ ಓದಿರೆ ಎಂತ ಪ್ರಯೋಜನ ಕೇಳಿದೆ .ಅಂಬಗ ಅವ ಒಳ್ಳೆ ಕೆಲಸ ಸಿಕ್ಕುತ್ತು ಹೇಳಿದ ,ಆನು ಹೇಳಿದೆ ಅಂಬಗ ಪರಿಶ್ರಮ ಪ್ರತಿಭೆ ಪ್ರಾಮಾಣಿಕತೆ ಇದ್ದರೆ ಎಂತ ಓದಿದರೂ ಕೆಲಸ ಸಿಕ್ಕುತ್ತು ಹೇಳಿ .ಎಂ ಎ ಓದಿದೋರು ನಾಯಿ ಸಂತೆ ಇದ್ದವು ಹೇಳುವ ಮಾತಿನ ಎನಗೆ ಸುಮಾರು ಜನಂಗ ಹೇಳಿತ್ತಿದವು.ದೊಡ್ಡೋರ ಇಂಥ ಮಾತಿನ ಕೇಳಿ ಎನ್ನತ್ತರೆ ಇವಂದೆ ಎನಗೆ ಹೇಳಿತ್ತಿದ .ಈ ಬಗ್ಗೆ ಎಂಗೊಗೆ ತುಂಬಾ ಚರ್ಚೆ ಆಗಿತ್ತು ಕೂಡಾ!
ಆದರೆ ಎನಗೆ ಅವನ ಗುರ್ತ ಸಿಕ್ಕಿತ್ತಿಲ್ಲೆ ಸುರುವಿಂಗೆ

ಆನು ಆರು ಹೇಳಿ ಗೊಂತಾಗಿ ಅಪ್ಪಗಲೇ ಅವನ ಮೋರೆಲಿ ತುಂಬಾ ಆಶ್ಚರ್ಯ ಕಂಡತ್ತು.ಮತ್ತೆ ಪುನಃ ಕೇಳಿದ ಅಂಬಗ

ಪತ್ರಿಕೆಗಳಲ್ಲಿ ಲೇಖನ ಬರವ ಲಕ್ಷ್ಮೀ ಜಿ ಪ್ರಸಾದ ನಿಂಗಳೆಯಾ ಹೇಳಿ ಕೇಳಿದ.ಅಪ್ಪು ಹೇಳಿ ಹೇಳಿದೆ.ಅಂಬಗ ಅಪ್ಪ ?! ಹೇಳಿ ಆಶ್ಚರ್ಯಲ್ಲಿ ಕೇಳಿದ "ಎಂ ಎ ಓದಿದೋರು ನಾಯಿ ಸಂತೆ ಇದ್ದು ಹೇಳಿದೋನು ಕೆಲಸ ಮಾಡುವ ಕಾಲೇಜಿಂಗೆ ಇದ್ದಕಿದ್ದ ಹಾಂಗೆ ಅತಿಥಿಯಾಗಿ ಆಹ್ವಾನಿಸಲ್ಪಟ್ಟು ಸಂಸ್ಥೆ ಯ ಹಿರಿಯ ಅಧಿಕಾರಿಗಳಿಂದ ಪರಿಚಯಿಸಲ್ಪಟ್ಟರೆ ನಂಬುಲೆ ಅಸಾಧ್ಯವಾಗಿ ಆಶ್ಚರ್ಯ ಅಪ್ಪದು ಸಹಜ ಕೂಡ !.ಅವನ ಕಣ್ಣು ಅರಳಿ ದೊಡ್ಡ ಆಗಿಹೆರ ಬಪ್ಪ ಹಾಂಗೆ ಆತು .ಅವಂಗೆ ಅದರ ಜೀರ್ಣಿಸಿಕೊಂಬಲೆ ಅಸಾಧ್ಯವಾಗಿತ್ತು! ಅಂಬಗ ಎನಗೆ ಕಣ್ಣುಗೆ ಹಾರುದು ಹೇಳುದು ಎಂತರ ಹೇಳಿ ಎನಗೆ ಗೊಂತಾತು.
ನಂತರ ಅವ "ಲಕ್ಷ್ಮ್ಯಕ್ಕ sorry ಅಂದು ಎನಗೆ ಅಷ್ಟು ತಿಳುವಳಿಕೆ ಇತ್ತಿಲ್ಲೇ .ಎಲ್ಲರು ದೊಡ್ಡೋರು ಹಾಂಗೆ ಮಾತಾಡಿಗೊಂಡು ಇತ್ತಿದವು ನಿಂಗ ಮದುವೆ ಆದ ಮೇಲೆ ಕಲಿವ ಬಗ್ಗೆ ಹಾಂಗೆ ಆನುದೇ ಬುದ್ದಿ ಇಲ್ಲದ್ದೆ ಮಾತಾಡಿದ್ದೆ ಎಂಗಳ ಮನೆಗೆ ಸಮ್ಮಾನಕ್ಕೆ ದೆನಿಗಗೇಳಿಕ್ಕಿ ಹಾಂಗೆ ಮಾತಾಡಿದ್ದು ತಪ್ಪು ಕ್ಷಮಿಸಿ" ಹೇಳಿದ.ಅದು ಅವನ ದೊಡ್ಡ ತನ ಅದು ಇರಲಿ
ಎನಗೆ ಮಾತ್ರ ಅಂಬಗ ಕಣ್ಣು ನೆತ್ತಿಗೆ ಹಾರಿದ್ದು /ಹೊಯಿದು ಹೇಳುವ ನುಡಿಗಟ್ಟು ನೆನಪಾಗಿ ಅದರ ಅರ್ಥ ಕೂಡಾ ಸರಿಯಾಗಿ ತಲೆಗೆ ಹೋತು .
ಆರಿಂಗಾದರೂ ನಂಬುಲೆ ಅಸಾಧ್ಯವಾದರೂ ವಾಸ್ತವ ಸತ್ಯ ಎದುರಾಗಿ ಅಪ್ಪಗ ಅಪ್ಪ ಆಶ್ಚರ್ಯವ ವಿವರ್ಸುವ ಸಂದರ್ಭಲ್ಲಿ ಅವನ /ಅದರ ಕಣ್ಣು ನೆತ್ತಿಗೆ ಹಾರಿದ್ದು ಹೇಳುವ ಮಾತಿನ ಬಳಕೆ ಮಾಡುತ್ತವು
ಅಂತೂ ಇಂತೂ ಅಭಿಮಾನ ಶೂನ್ಯ ಅವಿವೇಕಿಗಳ ಪಾಲಿಗೆ ಮೃತ ಭಾಷೆ ಆಗಿಪ್ಪ ಜೀವಂತ ಭಾಷೆ  ಸಂಸ್ಕೃತವ ಕಲ್ತು ಆನಂತೂ ಜೀವಂತ ಬರಹಗಾರ್ತಿ ಆಯ್ದೆಪ್ಪ /
ನಮ್ಮ ಸಮಾಜಲ್ಲಿ ತಪ್ಪು ಮಾಡಿದೋರ ಬಗ್ಗೆ ಉದಾರತೆ    ಇದ್ದಪ್ಪ  ಎಷ್ಟು ಉದಾರತೆ ಹೇಳಿರೆ ಅದರ ಹೇಳಿದರೆ ದೊಡ್ಡ ತಪ್ಪು ಹೇಳುವಷ್ಟು  !ಎಂತಕೆ ಹೇಳಿ ಗೊಂತಿಲ್ಲೆ ಎನಗೆ .
ಬಹುಶ ಆನು ಹೆಂಗಸು ಅನ್ನೇ  ತಮ್ಮ ಮೇಲೆ ಅಪ್ಪ ಅನ್ಯಾಯವ ಎಲ್ಲೂ ಹೇಳದ್ದೆ ಬಾಯಿ ಮುಚ್ಚಿ ಕ್ಷಮಯಾ ಧರಿತ್ರಿ ಆಗಿದ್ದರೇ  ಹೆಣ್ಣು ದೇವತೆ ,ಇಲ್ಲೆ ಅದರ ಪ್ರಶ್ನಿಸಿತ್ತೋ ಅನ್ಯಾಯವ ಹೇಳಿತ್ತೋ ಅಂಬಗ ಅದು ಕೂಡಲೇ ರಾಕ್ಷಸಿ ಆಗಿ ಬಿಡುತ್ತು ನಮ್ಮ ಪುರುಷ ಪ್ರಧಾನ ಸಮಾಜಲ್ಲಿ !.