Friday 21 June 2013

ಗಿಳಿ ಬಾಗಿಲು- ಗೌಡ ಭಾಷೆಗೆ ಹವ್ಯಕ ಭಾಷೆ ಮೂಲ !

ಮೊನ್ನೆ ಬೆಳ್ಳಾರೆಗೆ ಹೋಗಿತ್ತಿದೆ. ಕಾಲೇಜ್ ಬಿಡುವ ಹೊತ್ತಿಂಗೆ ಜೋರು ಮಳೆ ಬತ್ತಾ  ಇತ್ತು.ಹಾಂಗೆ ಮಳೆ ಕಮ್ಮಿ ಅಪ್ಪಲೇ ಕಾಯ್ತಾ ಮೆಟ್ಲಿನ ಹತ್ತರೆ ನಿಂತಿತ್ತಿದೆ .ಎನ್ನ ಹಾಂಗೆ ಎಂಗಳ ಪ್ರಿನ್ಸಿಪಾಲ್  ಸುಬ್ರಾಯ ಗೌಡ ಮತ್ತೆ ಚಿದಾನಂದಂದೆ ಮಲೆ ಬಿಡಲೇ ಕಾಯ್ತಾ ಇತ್ತಿದವು . ರಜ್ಜ ಹೊತ್ತಿಲಿ ಮಳೆ ಬಿಟ್ಟತ್ತು. ಅಮ್ಬಗ ಎನ್ಗಳ  ಪ್ರಿನ್ಸಿಪಾಲ್ "ಮಳೆ ಬಿಟ್ಟತ್ತು" ಹೇಳಿ ಹೇಳಿದ.ಎನ್ನ ಕೆಮಿ ಕುತ್ತ ಆತು ಎಂತಕೆ ಗೊತಿದ್ದ ಆವ ಎಂಗಳ ಪ್ರಿನ್ಸಿಪಾಲ್ ಗೌಡ ಜನಾನ್ಗದೊನು .ಸುಳ್ಯದ ಗೌಡ ಭಾಷೆದೆ ನಮ್ಮ ಹವ್ಯಕ ಭಾಷೆದೆ ಒಂದೇ ತರ ಕೇಳ್ತು. ಆನು ಸುರುವಿನ್ಗೆ ಬೆಲ್ಲರೆಗೆ ಹೋದಪ್ಪಗ ಎನಗೆ ಗೌಡರು ಆರು ಹವ್ಯಕರು ಆರು ಹೇಳಿ ಪಕ್ಕ ಗೊಂತಾಯಿಕ್ಕೊಂಡು ಇತ್ತಿಲ್ಲೆ ,ಅಷ್ಟರ  ಮತ್ಟ್ಟಿನ್ಗೆ  ಈ ಎರಡು ಭಾಷೆಗ ಒಂದೇ ರೀತಿ ಇದ್ದು .  ಎಂಗಳ ಭಾಷೇಲಿ ಇಪ್ಪ ಹಾಂಗೆ ಆವ, ಅದು,ಅವು  ಹೇಳುವ ಸರ್ವನಾಮಂಗ, ಉಚ್ಚಾರಣೆಯ ಸಾಮ್ಯತೆಗ ಇವೆಲ್ಲವ ನೋಡುವಾಗ ಆಶ್ಚರ್ಯ ಆವುತ್ತು .ಅಕ್ಕನೋವು ಬೈನ್ದವು ಹೋಯ್ದವು ಇತ್ಯಾದಿ ಪದಂಗಳ ಬಳಕೆ ಎಂಗಳ ಭಾಷೇಲಿ ಇಪ್ಪ ಹಾನ್ಗೆಯೇ ಅವರ ಗೌಡ ಭಾಷೆಲಿಯುದೆ ಇದ್ದು .ಎಂಗಳಲ್ಲಿ ಇಪ್ಪ ಒಂದು ವಿಶೇಷ ಪದ ಎಡಿಯ ಹೇಳುದು ಅವರಲ್ಲಿದೆ ಇದ್ದು . ಈ ಬಗ್ಗೆ ಹವ್ಯಕ ಕಣ್ಣನ -ಗೌಡ ಕನ್ನಡ ಭಾಷಾ ಬಾಂಧವ್ಯ ಹೇಳುವ ಒಂದು ಪ್ರಬಂಧವ ಆನು ಕರಾವಳಿ ಕನ್ನಡ ಎಂಬ ವಿಚಾರ ಸಂಕಿರಣಲ್ಲಿ ಮಂಡಿಸಿತ್ತಿದೆ .ಹವ್ಯಕರು ಗೌಡರು ಈ ಎರಡು ಜನಂಗಳುದೆ ಸುಳ್ಯದ ಮೂಲ ನಿವಾಸಿಗ ಅಲ್ಲ ಆದರೆ ಹವ್ಯಕರು ಅಲ್ಲಿಗೆ ಸುಮಾರು ೧೦೦೦ ವರ್ಷದ ಮೊದಲು ಬೈನ್ದವು .ಗೌಡಂಗ ಸುಮಾರು ೫೦೦ ವೇಷ ಮೊದಲು ಬೈನ್ದವು .ಗೌದಂಗಳ ಭಾಷೆ ಕನ್ನಡ ಆಗಿತ್ತು ,ಇಲ್ಲಿಯ ಮೂಲ ನಿವಾಸಿಗಳ ಭಾಷೆ ತುಳು .ಇದರ ಅವಕ್ಕೆ ಅನುಸರಿಸುಲೆ ಕಷ್ಟ ಆದಿಕ್ಕು. ಹಾಂಗಾಗಿ ಅವು ಕನ್ನಡಕ್ಕೆ ಹತ್ತರೆ ಇಪ್ಪ ಹವಿಗನ್ನದವ ವ್ಯವಹಾರಕ್ಕೆ ಬಳಸಿಕ್ಕು .ಅವರ ಕನ್ನಡ ಭಾಷೆಯ ಮೇಲೆ ಹವ್ಯಕ ಕನ್ನಡ ಬೀರಿದ ಪ್ರಭಾವಂದಾಗಿ ಗೌಡ ಕನ್ನಡ ಹೇಳುವ ಹೊಸತೊಂದು ಕನ್ನಡದ ಉಪ ಭಾಷೆ ಹುಟ್ಟಿ ಪ್ಪ ಸಾಧ್ಯತೆ ಜಾಸ್ತಿ ಇದ್ದು.ಹಾಂಗಾಗಿ ಗೌಡ ಭಾಷೆಗೆ ಹವ್ಯಕ ಭಾಷೆಯೇ ಮೂಲ ಆದಿ ಪ್ಪ ಸಾಧ್ಯತೆ ಇದ್ದು  ಹೇಳಿ ಎನ್ನ ಅಭಿಪ್ರಾಯ . ಈ ಬಗ್ಗೆ ಅಧ್ಯಯನ ನಡೆದರೆ ಹೆಚ್ಚು ತಿಳಿವಲೆ  ಎಡಿಗು .ಎಂಥ ಹೇಳ್ತೀರಿ ನಿಂಗ ?
ನಮಸ್ಕಾರ ,ಇನ್ನೊಂದರಿ ಕಾಂಬ -ಡಾ ||ಲಕ್ಷ್ಮಿ  ಜಿ ಪ್ರಸಾದ