Wednesday 21 October 2015

ಗಿಳಿಬಾಗಿಲು (ಹವ್ಯಕ ಬ್ಲಾಗ್ )-36 ಕುಂಡೆಗೆ ಹೆಟ್ಟಿ ಹಲ್ಲು ಉದುರ್ಸುಲೇ ಎಡಿಯ -ಡಾ.ಲಕ್ಷ್ಮೀ ಜಿ ಪ್ರಸಾದ

ತುಂಬಾ ದಿನಂದ ಬರವಲೇ ಆಯಿದಿಲ್ಲೇ ಪುರುಸೊತ್ತು ಇಲ್ಲ್ಲೇ ಹೇಳುದು ಒಂದು ನೆಪ ಅಷ್ಟೇ ವಾಸ್ತವಲ್ಲಿ ಅದು ಉದಾಸೀನವೇ ಆಗಿರೆಕ್ಕು ಹಾಂಗಾಗಿ ಇಂದು ಬರೆಯಕ್ಕೆ  ಹೇಳಿಗಟ್ಟಿ ಮಾಡಿ ಬರವಲೇ ಹೆರಟಿದೆ.

ಮೊನ್ನೆ ಊರಿಂಗೆ ಹೋದಿಪ್ಪಗ ಅಮ್ಮಯಾವುದೊ ಮಾತಿನ ನಡುವೆ "ಕುಂಡೆಗೆ ಹೆಟ್ಟಿ ಹಲ್ಲು ಉದುರ್ಸುಲೇ ಎಡಿಯ"  ಹೇಳುವ ಮಾತಿನ ಹೇಳಿದ.ಅಂಬಗ ಈ ನುಡಿಗಟ್ಟಿನ ಬಗ್ಗೆ ಬರೆಯಕ್ಕು ಹೇಳಿ ಗ್ರೇಶಿ ಅದರ ಎನ್ನ ಮೊಬೈಲ್ ನೋಟ್ ಲಿ ಬರದು ಮಡುಗಿದೆ 
ಎನ್ನ ಅಮ್ಮಎಲ್ಲರ ಹಾಂಗೆ ಅಲ್ಲ ,ತುಂಬಾ ವಿವೇಕಿ ,ಪ್ರಜ್ಞಾವಂತೆ , ಬಹಳ ವಾಸ್ತವವಾದಿ ಮತ್ತು ನೇರ ಮಾತಿನ ದಿಟ್ಟೆ ,ಹಾಂಗಾಗಿ ಎಲ್ಲವನ್ನೂ ಅವರ ಎದುರೇ ಇಪ್ಪದರ ಇಪ್ಪ ಹಾಂಗೆ ಹೇಳುತ್ತ.ಎನ್ನ ಅಮ್ಮನ ಹತ್ತರೆ ಹಿಂದೆ ಒಂದು ಎದುರು ಒಂದು ಸ್ವಭಾವ ಇಲ್ಲೇ ,ಎಲ್ಲವು ನೇರ.ಸ್ಪಷ್ಟ ಅಭಿಪ್ರಾಯಂಗ
 ಹಾಂಗಾಗಿ ಅಮ್ಮಂಗೆ ಅಡ್ಡ ಗೋಡೆ ದೀಪ ಮಡುಗಿದ ಹಾಗೆ ಇಪ್ಪ ಅಸ್ಪಷ್ಟ ಮಾತುಗ ನಡೆ ನುಡಿಗ ಅವುತ್ತಿಲ್ಲೇ .ಇಂಥ ಸಂದರ್ಭಗಳಲ್ಲಿ ಅಪ್ಪನ ಹತ್ರೆ ಅಮ್ಮ ಯಾವಾಗಲೂ ಹೇಳುತ್ತಾ ಇದ್ದ ನುಡಿಗಟ್ಟು ಇದು .
ಆರಾದರೂ ನಮಗೆ ಹಿಂದಂದ ಮುಂದಂದ ಕೆಟ್ಟದು  ಮಾತಾಡಿದರೆ ನಮಗೆ ಅವರ ಬಗ್ಗೆ ಏನಾದರೂ ಅಸಮಾಧಾನ ಇದ್ದರೆ ಅದರ ಅವರ ಸಂಬಂಧಿಕರ ಹತ್ತರೆ ಅಥವಾ ಇನ್ನರ ಹತ್ತರೆ ಹೇಳಿ ಪ್ರೆಯೋಜನ ಇಲ್ಲೇ .ಅದರ ಅವರತ್ರೆ ಮಾತಾಡಿ ಪರಿಹಾರ ಮಾಡಿಕೊಳ್ಳಕ್ಕು ಹೇಳುದು ಈ ನುಡಿಗಟ್ಟಿನ ತಾತ್ಪರ್ಯ .

ಹಲ್ಲು ಉದುರುಸಕ್ಕಾದರೆ ದೌಡೆಗೆ ಎರಡು ಮಡುಗಕ್ಕು ಹೊರತು ಕುಂಡೆಗೆ ಹೆಟ್ಟಿರೆ ಎಡಿಯ ,ಹಾಂಗೆಯೇ ಯಾವುದಾರು ಸಮಸ್ಯೆ ಇದ್ದರೆ ಅದರ ಅವರ ಹತ್ರೆ ಮಾತಾಡಿಯೇ ಪರಿಹರಿಸಕ್ಕು ಹೊರತು ಅದರ ಆರತ್ತ್ರಾದರೂ ದೂರಿ ಬೈದು ಪ್ರಯೋಜನ ಇಲ್ಲೇ .ಅವು ನಾವು ಹೇಳಿದ್ದಕ್ಕೆ ನಾಲ್ಕು ಹೆಚ್ಚು ಸೇರ್ಸಿ ಅವರತ್ರೆ ಹೇಳಿ ಸಮಸ್ಯೆಯ ಪರಿಹರಿಸುವ ಬದಲು ಇನ್ನೂ ದೊಡ್ಡ ಮಾಡುವ ಸಾಧ್ಯತೆ ಹೆಚ್ಚು .ಹಾಗಾಗಿ ಯಾವುದೇ ಸಮಸ್ಯೆ ಇದ್ದರೂ ಅದರ ನೇರವಾಗಿ ವ್ಯವಹರಿಸಿ ಪರಿಹಾರ ಮಾಡಿಕೊಳ್ಳಕ್ಕು ಹೇಳಿ ಸೂಚಿಸುವ ಹವ್ಯಕ ಭಾಷೆಯ ಚೆಂದದ ಒಂದು ನುಡಿಗಟ್ಟು ಇದು
ಕುಂಡೆ ಹೇಳುವ ಪದ ಬಳಕೆ ಅಸಭ್ಯ ಅನ್ಸುತ್ತೋ ಏನೋ ಹಾಂಗೆ ಅದರ ಬೆನ್ನು ಹೇಳಿಮಾಡುವ ಹೇಳಿ ಜ್ಹಾನ್ಸಿದೆ ಒಂದರಿ ಆದರೆಅದು ಬಳಕೆಲಿ ಇಪ್ಪದೆ ಹಾಂಗೆ ಅದು ಮಾತಾಡುವಾಗ ಅಸಭ್ಯ ಹೇಳಿ ಏನೂ ಅನ್ಸುತ್ತಿಲ್ಲೇ ಅದುಸಹಜವಾಗಿ ಬಳಕೆ ಆವುತ್ತು ಹಾನ್ಗಿಪ್ಪಗ ಅದರ ಬದಲಾಯಿಸುವ ಸ್ವಾತಂತ್ರ್ಯ ನಮಗಿಲ್ಲ ಹಾಂಗಾಗಿ ಅದರ ಹಾಂಗೆ ಮಡುಗಿದೆ ಬದಲಾಯಿಸುಲೇ ಹೋಯ್ದಿಲ್ಲೇ
ನಿಂಗಳ ಕಡೆಲಿಯೂ ಇದಕ್ಕೆ ಸಂವಾದಿಯಾಗಿಪ್ಪ ನುಡಿಗಟ್ಟುಗ ಇಕ್ಕು ಅಲ್ಲದ ?ಇದ್ದರೆ ತಿಳಿಸಿ ಆತಾ

ನಮಸ್ಕಾರ

ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕಿ
ಸರ್ಕಾರಿ ಪದವಿ ಪೂರ್ವ ಕಾಲೇಜು
ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ

Saturday 11 April 2015

ಗಿಳಿ ಬಾಗಿಲು (ಹವ್ಯಕ ಬ್ಲಾಗ್ ) 35 ಸೂಟೆ ಮಾಂಕಾಳಿ




ಅಯ್ಯೋ ರಾಮ !ಭೂತಗಳ ಅದ್ಭುತಜಗತ್ತು ಹೇಳಿಕೊಂಡು ಯಾವಾಗಲೂ ಭೂತಗಳ ಬಗ್ಗೆ ಬರದು ತಲೆ ತಿಂತು .ಈಗ ಗಿಳಿಬಾಗಿಲು ಹವ್ಯಕ ಬ್ಲಾಗ್ ಲಿಯೂ ಭೂತಗಳ ಬಗ್ಗೆ ಬರವಲೆ ಸುರು ಮಾಡಿತ್ತ !ಹೇಳಿ ತಲೆ ಬಿಸಿ ಆತ !
ತಲೆಬಿಸಿ ಬೇಡ ಇಲ್ಲಿ ಭೂತಗಳ ಬಗ್ಗೆ ಬರೆತ್ತಿಲ್ಲೆ ಖಂಡಿತ! ಮತ್ತೆ ಭೂತದ ಚಿತ್ರ ಹಾಕಿದ್ದು ಎಂಥಕೆ ಹೇಳಿ ಗೊಂತಾಯಕ್ಕಾದರೆ ಪೂರ್ತಿ ಓದಿ
ಗಿಳಿಬಾಗಿಲಿನ ತೆಗಯದ್ದೆ ತುಂಬಾ ದಿನ ಆತು .ಕೆಲಸದ ಒತ್ತಡ ಹೇಳುವ ನೆಪ ಇದ್ದರೂ ಮುಖ್ಯವಾಗಿ ಉದಾಸೀನವೇ ಕಾರಣ !
ಇನ್ನು ಹೀಂಗೆ ಬಿಟ್ರೆ ಆಗ ಹೇಳಿ ಬರವಲೆ ಆಲೋಚಿಸಿದೆ .ಮೊನ್ನೆಯೇ ಸೂಟೆ ಮಾಂಕಾಳಿ ಬಗ್ಗೆ ಬರೆಯಕ್ಕು ಹೇಳಿ ಗ್ರೇಶಿತ್ತಿದೆ.
ಸಣ್ಣಾದಿಪ್ಪಗ ಆನು ತುಂಬಾ ಜೋರು ಇತ್ತಿದೆ ಹೇಳಿ ಕಾಣೆಕ್ಕು,ಹಾಂಗಾಗಿ ಆನು ಸಣ್ಣದಿಪ್ಪಗ "ಅದು ಸಾಮ್ಯಾದ್ದಲ್ಲ  ಮಹಾ ಸೂಟೆ ಮಾಂಕಾಳಿ "

ಹೇಳುವ ಈ ಬೈಗಳಿನ ಸುಮಾರು ಸರ್ತಿ ಅಜ್ಜಿ ಕೈಂದ ತಿಂದಿದೆ .ಅದು ತುಂಬಾ ಜೋರು ಇಪ್ಪೋರಿನ್ಗೆ ಬಳಸುವ ಬೈಗಳಿನ ಪದ ಭಾರೀ ಅಪಮಾನಕರ ಹೇಳಿ ಎನ್ನ ಭಾವನೆ ಆಗಿತ್ತು .
ಅಲ್ಲದ್ದೆ ತಲೆಕಸವಿನ ಸರಿಯಾಗಿ ಬಾಚದ್ದೆ ಬಿಕ್ಕಿ ಹಾಕಿಕೊಂಡು ತಿರುಗಿದರೂ ಎಂಥ ಕೋಲ ಇದು ಸೂ ಟೆ ಮಾಂಕಾಳಿ ಹಾಂಗೆ ಹೇಳುವ ಬೈಗಳೂ ಬಳಕೆಲಿ ಇತ್ತು .
ಆದರೆ ಎನಗೆ ಸೂಟೆ ಮಾಂಕಾಳಿ ಹೇಳಿರೆ ಎಂತ ಹೇಳಿ ಗೊಂತಿತ್ತಿಲ್ಲೆ.ಸೂಟೆ ಹೇಳಿರೆ ದೊಂದಿ ಹೇಳಿ ಗೊಂತಿದ್ದರೂ ಬೈಗಳಿನ ಸೂಟೆ ಪದಕ್ಕೆ ಜೋರು ಹೇಳುವ ಅರ್ಥ ಇದ್ದು ಹೇಳಿ ಭಾವಿಸಿತ್ತಿದೆ ,ಈಗಲೂ ಜೋರು ಹೇಳುವ ಅರ್ಥ ಇದ್ದು
ಆದರೆ ಸೂಟೆ ಮಾಂಕಾಳಿ ಹೇಳುವ ಬೈಗಳು ಪೂರ್ತಿ ಅರ್ಥ ಆದ್ದು ಮೊನ್ನೆ  ಮುಖ ಪುಟದ ನೆಂಟ್ರು ಆದ ವೆಂಕಟರಾಜ ಕಬೆಕೋಡು ಅವರ ಮನೆ ಹತ್ರೆ ಕಾನ ಮಠಲ್ಲಿ ನಡದ ಸೂಟೆ ಮಾಂಕಾಳಿ ಭೂತದ ಕೋಲದ ಸಣ್ಣ ವೀಡಿಯೊ ಕ್ಲಿಪ್ಪಿಂಗ್ ಮತ್ತು ಫೋಟೋ ಕಳುಸಿದ್ದರ ನೋಡಿ ಅಪ್ಪಗಲೇ !

ಸೂಟೆ ಮಾಂಕಾಳಿ ಭೂತದ ಬಗ್ಗೆ ಮಾಹಿತಿ ಇಲ್ಲೇ ಆದರೆ ಅದು ಎರಡೂ ಕೈಗಳಲ್ಲಿ ಸೂಟೆ ಹೊತ್ತಿಸಿಕೊಂಡು ಬೀಜಿಕೊಂಡು ಉಗ್ರವಾಗಿ ಕೊಣಿತ್ತು.
ಆ ದೈವ ಕೋಪಾವೇಶಂದ ಉಗ್ರವಾಗಿ ಕೊಣಿವ ಕಾರಣ ಕೋಪಿಷ್ಟರ ಕೋಪ ತಾಪಗಳ ಬಗ್ಗೆ ಹೇಳುವಾಗ ಸೂಟೆ ಮಾಂಕಾಳಿ ಹೇಳುವ ಪದ ಬಳಕೆಗೆ ಬಂದಿರೆಕ್ಕು ಅಲ್ಲದ ?ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದೋರು ತಿಳಿಸಿ
ನಮಸ್ಕಾರ
ಡಾ.ಲಕ್ಷ್ಮೀ ಜಿ ಪ್ರಸಾದ