Wednesday, 7 August 2013

ಗಿಳಿ ಬಾಗಿಲು -ಅವ ದೊಡ್ಡ ಮುಂಡೆಂಗಿ ಕುಜುವೆ

                                                 ಅವ ದೊಡ್ಡ ಮುಂಡೆಂಗಿ ಕುಜುವೆ
ಎನ್ನ ಮಗ ೧೦ನೆಲಿ ಓದ್ತಾ ಇದ್ದ .ಮೊಬೈಲ್ ಲಿ ಫೇಸ್ ಬುಕ್ ಲಿ ಅವನ ಸಹಪಾಟಿ  ಗಳತ್ತರೆ ಮಾತಾಡ್ತಾ ಇರ್ತ .ಒಳ್ಳೆ ಸಾತ್ವಿಕ ಮಾಣಿ ,ಆದರೂ  ಆವ ಆರತ್ತರೆ ಎಂತ ಮಾತಾಡ್ತಾ ಹೇಳುದರ ಗಮನಿಸುತ್ತಾ ಇರ್ತೆ ,ಹಾಂಗೆ ಇಂದು ಅವನ ಫೇಸ್ ಬುಕ್  ತೆಗದು ಆರತ್ತರೆ ಎಂತ ಚಾಟ್  ಮಾಡಿದ್ದ ಹೇಳಿ ನೋಡ್ತಾ ಇತ್ತಿದೆ .ಅವನ ಗೆಳೆಯನೊಟ್ಟಿನ್ಗೆ ಅದು ಇದು ಮಾತಾಡಿದ್ದ .ಅದರಲ್ಲಿ ಒಬ್ಬನ ಹತ್ತರೆ ನಮ್ಮ ಭಾಷೇಲಿ ಮಾತಾಡಿದ್ದ .ಆರನ್ನೊ  ಅವು ಇಬ್ರು ದೂರಿದ್ದವು !ಅದರಲ್ಲಿ ಆರೋ ಒಬ್ಬ ಇವಕ್ಕಿಬ್ರಿಂಗೆ ಎಂಥದೋ ಬೇಕಾದ ಸಹಾಯ ಮಾಡಿದ್ದಾ ಇಲ್ಲೆ .ಅದರ ಎನ್ನ ಮಗ "ಅ ವ ಎಂತಕ್ಕೂ ಆಗ ಮಾರಾಯ"  ಹೇಳಿ ಬರದ್ದ .ಮಗನ ಗೆಳೆಯ " ಅಪ್ಪು ಮಾರಾಯ ಅವ ದೊಡ್ಡ ಮುಂಡೆಂಗಿ ಕುಜುವೆ" ಹೇಳಿ ಬರದ್ದ .ಎನಗೆ ಇದರ ಓದಿ ಭಾರಿ ಕೊಷಿ ಆತು.! ನಮ್ಮ ಭಾಷೆಲಿ ಎಷ್ಟು ಚಂದದ ಪದಂಗಳ ಬಳಕೆ ಇದ್ದು ಹೇಳಿ .ಒತ್ತಿನ್ಗೆ ಈಗಣ ಮಕ್ಕೊಗೂ ಇಂತ ವಿಶಿಷ್ಟ ಪದಂಗಳ ಬಳಕೆ ಗೊಂತಿದ್ದಲ್ಲದಾ ಹೇಳಿ! .ಕುಜುವೆ ಹೇಳಿದರೆ ಹಲಸಿನ ಕಾಯಿ. ಬಹು ಉಪಯೋಗಿ ತರಕಾರಿ ಅದು .ಅದರ ಬೆಂದಿ ಮಾಡುಲೆ, ಆವುತ್ತು ಬೇಳೆ ಯನ್ನೂ ಕೊದಿಲಿನ್ಗೆ ಹಾಕುತ್ತವು ,ಇನ್ನು ರೆಚ್ಚೆ, ಹೊದುಂಕುಳು,ಹೂಸರೆ  ಎಲ್ಲವೂ ದನಗೊಕ್ಕೆ ತಿಮ್ಬಲೆ ಆವುತ್ತು .ಅದರ ಎಲ್ಲ ಭಾಗಂಗಳುದೆ ಉಪಕಾರಿ .ಆದರೆ ಮುಂಡೆಂಗಿ ಕುಜುವೆ ಇದಕ್ಕೆ ತದ್ವಿರುದ್ಧ .ಹಸೆ ಮಡವಲೆ ಉಪಯೋಗಿಸುವ ಮುಂಡೆಂಗಿ  ಸೆಸಿ /ಬಲ್ಲೆಲಿ ಎಷ್ಟುದೆ ಕಾಯಿ ಬಿಡ್ತು. ಇದು ನೋಡುಲೆ ಕುಜುವೆ (ಎಳತ್ತು ಹಲಸಿನ ಕಾಯಿ )ಹಾಂಗೆ ಕಾಣ್ತು .ಹಾಂಗಾಗಿ ಇದರ ಮುಂಡೆಂಗಿ ಕುಜುವೆ ಹೇಳಿ ಹೇಳ್ತವು .ಆದರೆ ಇದು ನಿರರ್ಥಕ ವಸ್ತು .ಇದರಲ್ಲಿ ಸೊಳೆ ,ಬೇಳೆ ಯಾವದೂ ಇಲ್ಲೆ .ಇದರ ದನಗ ಕೂಡ ತಿನ್ತವಿಲ್ಲೆ .ಇದರಲ್ಲಿ ಬೀಜ ಇಲ್ಲೆ ,ಹಾಂಗಾಗಿ ಇನ್ನೊಂದು ಮುಂಡೆಂಗಿ  ಸೆಸಿ ಕೂಡಾ ಇದರಲ್ಲಿ ಹುಟ್ಟುತ್ತಿಲ್ಲೆ. ಹಾಂಗಾಗಿ ಇದರ ಹುಟ್ಟೇ ವ್ಯರ್ಥ .ಅದರಂದ ಆರಿನ್ಗೂ ಒಂದಿನಿತೂ ಉಪಯೋಗ ಆಗ .ಆರೋಬ್ಬಂಗೂ ಏನೊಂದೂ ಉಪಕಾರ ಮಾಡದ್ದೋರಿನ್ಗೆ ನಮ್ಮ  ಭಾಷೆಲಿ " ಅವ ದೊಡ್ಡ ಮುಂಡೆಂಗಿ ಕುಜುವೆ" ಹೇಳಿ ಹೇಳ್ತವು .ಎಷ್ಟು ಚೆಂದದ ಹೋಲಿಕೆ ,ಉಪಮೆ ಅಲ್ಲದ ? ಇದು  ಆಡು ಮಾತಿಲಿ ರೂಪಕವಾಗಿ  ಬತ್ತು .ಇದೊಂದು ಅತ್ಯಂತ ನೈಜವಾದ ಮಾತಿನ ಬಳಕೆ ,ಇಂತ ತುಂಬಾ ಚೆಂದದ ಪದಂಗ ಎಂಗಳ ಭಾಷೆಲಿ ಇದ್ದು ಇತ್ತೀಚೆಗಂಗೆ ಇಂತ ಪದಂಗಳ ಬದಲಿನ್ಗೆ ಆವಾ ಯೂಸ್ಲೆಸ್ ಇತ್ಯಾದಿ ಇಂಗ್ಲಿಷ್ ಪದಂಗ ಬತ್ತಾ ಇದ್ದು ಹೇಳುದು ರಜ್ಜ ಬೇಜಾರಿನ ವಿಷಯ !ಯೂಸ್ಲೆಸ್ ಹೇಳುವ ಪದ ಮುಂಡೆಂಗಿ ಕುಜುವೆ ಯಷ್ಟು ಗಟ್ಟಿ  ಪದ ಅಲ್ಲ !ಇದಕ್ಕೆ ಎಂತ ಹೇಳ್ತಿ ?ನಿಂಗಳ ಅಭಿಪ್ರಾಯ ತಿಳಿಸಿ ,
   
ಇನ್ನೊಂದರಿ ಕಾಂಬ
                           ನಮಸ್ಕಾರ
                                                           ಲಕ್ಷ್ಮೀ ಜಿ ಪ್ರಸಾದ 

10 comments:

  1. ಹೀಂಗಿಪ್ಪ ಆಡುಮಾತಿನ ರೂಪಕಂಗೊ ಮರೆಯಾಗದ್ದ ಹಾಂಗೆ ಅಕ್ಷರ ರೂಪಕ್ಕೆ ಇಳಿಸಿದ ಅಕ್ಕಂಗೆ ವಂದನೆಗೊ.

    ReplyDelete
  2. ಧ್ನ್ಯವಾದಂಗ ,ಎಂಗಳ ಕೋಳ್ಯೂರು ಸೀಮೆಯ ಹವಿಗನ್ನಡ ರಜ್ಜ ಬೇರೆ ಎಂಗಳಲ್ಲಿ ಪದಂಗಳ ಕೊನೆಗೆ ಓ ಕಾರ ಇಲ್ಲೆ ಹಾಂಗೆ ಬೇರೆ ಕೆಲವು ವಿಶೇಷತೆಗಳುದೆ ಇದ್ದು ಹಾಂಗೆ ಅದರೆಲ್ಲ ಬರವ ಹೇಳಿ ಈ ಬ್ಲಾಗ್ ತೆಗದ್ದು .ನಿನ್ಗಳೆಲ್ಲರ ಪ್ರೋತ್ಸಾಹಂಗೊಕ್ಕೆ ಧನ್ಯವಾದಂಗ

    ReplyDelete
  3. Very good. Please collect and publish all Havyaka phrases

    ReplyDelete
    Replies
    1. ನಿಂಗಳ ಪ್ರೋತ್ಸಾಹಕ್ಕೆ ಧನ್ಯವಾದಂಗ

      Delete
  4. ಭಾರಿ ಲಾಯಕ ಆಯಿದು ಅಕ್ಕ!

    ReplyDelete
    Replies
    1. ನಿಂಗಳ ಪ್ರೋತ್ಸಾಹಕ್ಕೆ ಧನ್ಯವಾದಂಗ

      Delete
  5. ನಿಂಗಳ ಬರವಣಿಗೆ ತುಂಬ ಲಾಯಕ ಇದ್ದು. ಇನ್ನಷ್ಟು ಬರಳಿ.

    ReplyDelete
    Replies
    1. ಧನ್ಯವಾದಂಗ ಕೆ ಮಹೇಶ ನಿಂಗೊಗೆ ನಿನ್ಗಳೆಲ್ಲರ ಪ್ರೋತ್ಸಾಹ ಸದಾ ಇರಲಿ

      Delete
  6. ಎಂಗಳ ಭಾಷೆಯ ಚೆಂದದ ಪದಂಗಳ ಆಡುಮಾತಿನ ರೂಪಕಂಗೊ ನಿಂಗಳ ಬ್ಳಾಗಂಗಳಲ್ಲಿ ನಿರಂತರವಾಗಿ ಮೂಡಿಬರಲಿ.

    -ಪ.ರಾಮಚಂದ್ರ

    ReplyDelete
    Replies
    1. ಧನ್ಯವಾದಂಗ ರಾಮ ಚಂದ್ರಣ್ಣ ,ನಿಂಗಳ ಪ್ರೋತ್ಸಾಹ ಸದಾ ಹೀಂಗೇ ಇರಲಿ

      Delete