Friday 13 December 2013

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-ಅಲ್ಪ ಒಳುದು ಹಾಳು ಹಲಾಕು ಆಯಿದು



“ಅಡಿಗ್ಗೆಯೋವು ಅಲ್ಪ ಮಾಡಿ ಹಾಕಿದ್ದವು . ಅಲ್ಪ ಒಳುದು ಹಾಳು ಹಲಾಕು ಆಯಿದು ಹೇಳುವ ಮಾತಿನ ನಮ್ಮ ಭಾಷೆಲಿ ಸಾಮನ್ಯಾವಾಗಿ ಉಪಯೋಗಿಸುತ್ತವು.ಅನುಪತ್ಯ ಮಾಡಿ ಅಪ್ಪಗ ಕೆಲವು ಸರ್ತಿ ಅಡಿಗೆಯೋರ (ಇದು ಸತ್ಯಣ್ಣನ ಬಗ್ಗೆ ಅಲ್ಲ.ಸತ್ಯಣ್ಣನ ಅಡಿಗೆ ಮೂರನೇ ಹಂತಿಗೆ ಅಲ್ಲಿಂದಲ್ಲಿಗೆ ಹರ ಹರಾ ಆವುತ್ತಡ!!)!ಅಂದಾಜು ತಪ್ಪಿ ಅಶನ, ಕೊದಿಲು,ಮೇಲಾರಂಗ ತುಂಬಾ ಒಳುದು ಹಾಳಪ್ಪದು ಇದ್ದು .ಕೆಲವು ಸರ್ತಿ ಗ್ರೇಶಿದಷ್ಟು ಜನಂಗ ಬಾರದ್ದೆ ಒಳಿವದು ಇದ್ದು .ಇಂಥ ಸಂದರ್ಭಲ್ಲಿ ತುಂಬ ಒಳುದು ಹಾಳಾಯಿದು ಹೇಳುದರ ಅಲ್ಪ /ಅಲ್ಪ ಒಳುದು ಹಾಳಾಯಿದು ಹೇಳಿ ಹೇಳ್ತವು.

ಕನ್ನಡದ ಪ್ರಾದೇಶಿಕ ಉಪ ಭಾಷೆ ಹೇಳಿಯೇ ಗುರುತಿಸಲ್ಪಡುವ ನಮ್ಮ ಭಾಷೆಲಿ ಬಳಕೆಲಿ ಇಪ್ಪ ಕೆಲವು ಕನ್ನಡ ಪದಂಗೊಕ್ಕೆ ನಮ್ಮ ಭಾಷೆಲಿ ವಿರುದ್ಧವಾದ ಅರ್ಥ ಬಳಕೆಲಿ ಇದ್ದು .ಇಂತಾದ್ದೆ ಒಂದು ಪದ ಅಲ್ಪ ಹೇಳುದು .ಕನ್ನಡಲ್ಲಿ ಅಲ್ಪ ಹೇಳ್ರೆ ಕಮ್ಮಿ ಹೇಳಿ ಅರ್ಥ .ಆದರೆ ನಮ್ಮ ಭಾಷೆಲಿ ತುಂಬ ಹೇಳುವ ಅರ್ಥಲ್ಲಿ ಇದು ಬಳಕೆ ಆವುತ್ತು .”ಅವೆಂತ ಒಂದೆರಡು ಜನಂಗಳ?ಅವು ಅಪ್ಪಚ್ಚಿ ದೊಡ್ಡಪ್ಪ ಮಾವ ಅತ್ತೆ ಮಕ್ಕ ಮರಿಗ ಹೇಳಿ ಅಲ್ಪ ಇದ್ದವು” ಹೇಳಿ ದೊಡ್ಡ ಕುಟುಂಬದ ಬಗ್ಗೆ ಹೇಳುದು ಇದ್ದು .

ಸುತ್ತ ಮುತ್ತ ಎಲ್ಲಿ ನೋಡ್ರೂ ಬ್ಯಾರಿಗಳೇ ಕಾಣ್ತಾ ಇಪ್ಪ ಕನ್ಯಾನ ಉಪ್ಪಳದ ನಡುವೆ ಮನೆ ಇಪ್ಪ ಎಂಗಳ ಬೇತದ ಅಜ್ಜ , ”ಅಲ್ಪ ಸಂಖ್ಯಾತರು ಹೇಳಿ ಇವರ ದೆನಿಗೇಳುದು ಸರಿ.ಆದರೆ ಅದು ನಮ್ಮ ಭಾಷೆಯ ಅಲ್ಪ ಕನ್ನಡದ ಅಲ್ಪ ಅಲ್ಲ” ಹೇಳಿ ಎರಡು ಕೈ ಆಕಡೆ ಈ ಕಡೆ ಬಿಡುಸಿ ಅಗಾಲ್ಸಿ ತೋರ್ಸಿ ನೆಗೆ ಮಾಡಿಗೊಂಡು ಇತ್ತಿದವು!

ಅಲ್ಪ ಹೇಳುವ ಪದಕ್ಕೆ ನುಡಿಗಟ್ಟಾಗಿ ಬಳಕೆ ಮಾಡುವಗ ತುಂಬಾ /ಹೆಚ್ಚು ಹೇಳುವ ಅರ್ಥ ಇದ್ದರೂ ಕಮ್ಮಿ ಹೇಳುವ ಸರ್ತ ಅರ್ಥಲ್ಲಿಯೂ ಬಳಕೆ ಆವುತ್ತು ಕೆಲವು ಸರ್ತಿ. “ಅವು ಬರಿ ಅಲ್ಪಂಗ ಅವರ ವ್ಯವಹಾರ ಆಗ ” ಹೇಳುವ ಮಾತು ನಮ್ಮ ಭಾಷೆಲಿ ಬಳಕೆಲಿ ಇದ್ದು.ಇಲ್ಲಿ ಆ ಅಲ್ಪಂಗ ಹೇಳ್ರೆ ಅವು ರಜ್ಜ ಬುದ್ಧಿ ಇಲ್ಲದ್ದೋರು,ನೀತಿ ನಿಯತ್ತು ಇಲ್ಲದ್ದೋರು, ಸಣ್ಣ ಮನಸ್ಸಿನೋರು ಹೇಳುವ ಅರ್ಥ ಇದ್ದು.
ಕೋಳ್ಯೂರು ಸೀಮೆಲಿ ” ಅಲ್ಪ ”ಪದಕ್ಕೆ ಹೀಂಗೆ ಇಪ್ಪ ಅರ್ಥ ಪ್ರಚಲಿತ ಇದ್ದು .ಹವ್ಯಕಲ್ಲಿ ಎಲ್ಲ ಕಡೆಲಿಯೂ ಇಕ್ಕು ಅಲ್ಲದ ?ತಿಳುಸಿ

2 comments:

  1. ಲಕ್ಷ್ಮಿ ಅಕ್ಕಾ,
    ಭಾಷೆಲ್ಲಿ ಬರಹಂಗಳ ಕಂಡು ಇಲ್ಲಿಗೆ ಬಂದೆ...
    ಒಳ್ಳೆಯ ವಿಚಾರಂಗಳ ಹೆರ್ಕಿ ಬರತ್ತ ಇದ್ದಿ..ಒಳ್ಳೆದಾಗಲಿ.
    ನಿಂಗಳ ಬ್ಲಾಗಿಂಗೆ ಗಿಳಿಬಾಗಿಲು ಹೇಳುವ ಹೆಸರೇ ಒಳ್ಳೆ ಒಪ್ಪುತ್ತು. ಶಿರ್ಷಿಕೆ ಹಾಂಗೆ ಇದ್ದರೆ ಒಳ್ಳೆದೇನೋ

    ReplyDelete
    Replies
    1. ನಿಂಗಳ ಅಭಿಮಾನ ದೊಡ್ಡದು ಓದಿ ಅಭಿಪ್ರಾಯಿಸಿದ್ದಕ್ಕೆ ಆನು ಋಣಿ ,ನಿನ್ಗಳೆಲ್ಲರ ನಿರಂತರ ಪ್ರೋತ್ಸಾಹ ಎನ್ನ ಬರವಣಿಗೆಗೆ ಪ್ರೇರಕ ಶಕ್ತಿ ,ಧನ್ಯವಾದಂಗ VENU VINOD

      Delete