Tuesday 28 January 2014

ಗಿಳಿಬಾಗಿಲು (ಹವ್ಯಕ ಬ್ಲಾಗ್ )-ತಲೆಲಿ ಬರದ್ದರ ಎಲೆಲಿ ಉದ್ದುಲೆ ಎಡಿಯ

ಲಲಾಟ ಲಿಖಿತಾ ಲೇಖಾಂ ಪರಿಮಾರ್ಷ್ಟುಂ ನ ಶಕ್ಯತೇ|
ಹಣೆಲಿ ಲಿ ಬರದ್ದರ ಉದ್ದುಲೆ ಎಡಿಯ ಹೇಳುವ ಈ  ಮಾತು ಕನ್ನಡಲ್ಲಿ  ಹಣೆ ಬರಹವನ್ನು ಬ್ರಹ್ಮನಿಗೂ ಬದಲಿಸಲು ಸಾಧ್ಯವಿಲ್ಲ ಹೇಳಿ ಬಳಕೆಲಿ ಇದ್ದು.

ಆದರೆ ಈ ಮಾತು ನಮ್ಮ ಭಾಷೆಲಿ  ಇನ್ನೂ ಹೆಚ್ಚನ ಅರ್ಥ ವಿಸ್ತಾರವ ಪಡದು ಹಣೆಲಿ ಬರದ್ದರ ಎಲೆಲಿ ಉದ್ದುಲೆಡಿಯ ಹೇಳಿ ಬಳಕೆ ಆವುತ್ತು .
ಯಥಾ ಧೇನು ಸಹಸ್ರೇಷು ಪುತ್ರೋ ವಿಂದತಿ ಮಾತರಮ್|
ತಥಾ ಪೂರ್ವಾರ್ಜಿತಾನಿ  ಕರ್ಮಾಣಿ  ಕರ್ತಾರಮನುಸರಂತಿ||

ಹೇಂಗೆ ಸಾವಿರಾರು ದನಂಗಳ ನಡುವೆ ಕಂಜಿ ಅಬ್ಬೆಯನ್ನೇ ಹಿಂಬಾಲಿಸುತ್ತು,ಹಾಂಗೆ ನಮ್ಮ ಪೂರ್ವಾರ್ಜಿತ ಕರ್ಮ ನಮ್ಮ ಹಿಂಬಾಲಿಸುತ್ತು .ಈ ಕರ್ಮದ ಫಲಕ್ಕೆ ಅನುಗುಣವಾಗಿ ನಾವು ಹುಟ್ಟಕ್ಕಾದರೆ ಮೊದಲೇ ಈ ಭೂಮಿಲಿ ಏನೇನು ಸುಖ ದುಖಂಗಳ ಅನುಭವಿಸಕ್ಕು ಹೇಳುದರ ದೇವರು ಬರೆದಿರುತ್ತ ಹೇಳಿ ನಾವು ನಂಬಿಗೊಂಡು ಬೈಂದು.

ಈ ಬಗ್ಗೆ ಎನಗೆ ಹಿತೋಪದೇಶಲ್ಲಿ ಇಪ್ಪ ಒಂದು ಕಥೆ ಎನಗೆ ನೆನಪಾವುತ್ತು.ಒಂದೂರಿಲಿ ಸೋಮದತ್ತ ಹೇಳುವ ನಿಪುಣ ನೇಕಾರ ಇರುತ್ತ.ಅವಂಗೆ ಎಂಥ ಮಾಡ್ರೂಎಷ್ಟೇ ಕೆಲಸ ಮಾಡಿರೂ ಹೊಟ್ಟೆಗೆ ಬಟ್ಟೆಗೆ ಅಪ್ಪದರಂದರ ಹೆಚ್ಚು ಸಂಪಾದನೆ ಅವುತ್ತಿಲ್ಲೆ.ಅವನ ಊರಿಲಿ ಇಪ ಇತರ ಸಾಮಾನ್ಯ ನೆಕಾರಂಗೊಕ್ಕೆಇವನದ ಹೆಚ್ಚು ಸಂಪಾದನೆ ಆವುತ್ತು.ಹಾಂಗೆ ಅವ ಹೆಂಡತಿ ಹತ್ತರೆ ಆನು ಬೇರೆ ಊರಿಂಗೆ ಹೋಗಿ ಕೈ ತುಂಬಾ ಸಂಪಾದನೆ ಮಾಡಿ ಬತ್ತೆ ಹೇಳಿ ಹೇಳುವಾಗ ಹೆಂಡತಿ "ಲಲಾಟ ಲಿಖಿತಾ ಲೇಖಾಂ ಪರಿಮಾರ್ಷ್ಟುಂ ನ ಶಕ್ಯತೇ|" ಹೇಳಿ ಹೇಳುದರ ನೆನಪು ಮಾಡಿ ಕೊಟ್ಟು ವ್ಯರ್ಥ ಪ್ರಯತ್ನ ಬೇಡ ಹೇಳಿ ಹೇಳುತ್ತು.ಆದರೆ ಸೋಮ ದತ್ತ ಹಠ ಮಾಡಿ

ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ |
ನಹಿ ಸುಪ್ತಸ್ಯ ಸಿಂಹಸ್ಯ ಮುಖೇ ಪ್ರವಿಶಂತಿ ಮೃಗಾಃ ||
"ಕಾರ್ಯ ಮಾಡುವುದರಂದಲೇ ಮನಸಿನ ಆಸೆ ಆಕಾಂಕ್ಷೆಗ ಈಡೆರುತ್ತು ಹೊರತು ಕೇವಲ ಆಸೆಂದ ಅಲ್ಲ ,ಒರಗಿಪ್ಪ ಸಿಂಹದ ಬಾಯಿಯ ಒಳ ಪ್ರಾಣಿಗ ಅವು ಆಗಿಯೇ ಪ್ರವೇಶ ಮಾಡುತ್ತವಿಲ್ಲೆ" ಹೇಳಿ ಚರ್ಚಿಸಿ ಬೇರೆ ಊರಿಂಗೆ ಸಂಪಾದನೆ ಮಾಡುಲೆ ಹೊವುತ್ತ.

ಅಲ್ಲಿ ಆರು ತಿಂಗಳು ಚಂದಕ್ಕೆ ದುಡುದು ಐನ್ನುರು ಚಿನ್ನದ ವರಹ ಸಂಪಾದನೆ ಮಾಡಿಕೊಂಡು ಊರಿಂಗೆ ಬತ್ತ.ಬಪ್ಪ ದಾರಿಲಿ ಒಂದು ಕಾಡು ಇರುತ್ತು ಅಲ್ಲಿಗೆ ಎತ್ತುವಾಗ ಕಸ್ತಲೆ ಆವುತ್ತು.ಅವ ಕ್ರೂರ ಪ್ರಾಣಿಗಳ ಹೆದರಿಕೆಗೆ ಒಂದು ಮರ ಹತ್ತಿ ರಜ್ಜ ಕಣ್ಣು ಮುಚ್ಚಿ ಒರಗುತ್ತ.ಅವಂಗೆ ಕನಸಿಲಿ ಕರ್ತಾ ಮತ್ತು ಕರ್ಮ ಮಾತಾಡುದು ಕಾಣುತ್ತು, ಕರ್ಮ ಕರ್ತನ ಹತ್ತರೆ "ಈ ಸೋಮದತ್ತಂಗೆ ಹೊಟ್ಟೆಗೆ ಬಟ್ಟೆಗೆ ಮಾತ್ರ ಬರದ್ದು ನೀನು ಎಂತಕೆ ಅದರಂದ ಹೆಚ್ಚು ಪೈಸೆ ಕೊಟ್ಟೆ ಹೇಳಿ ಕೇಳುತ್ತ.ಅಂಬಗ ಕರ್ಮ "ದುಡಿದೊನಿಂಗೆ ತಕ್ಕ ಪ್ರತಿಫಲ ಕೊಡುದು ಎನ್ನ ಕರ್ತವ್ಯ ಮುಂದಣದ್ದು ನಿನಗೆ ಬಿಟ್ಟದು ಹೇಳಿ..ಅಷ್ಟಪ್ಪಗ ಇವಂಗೆ ಎಚ್ಚರಾವುತ್ತು.ನೋಡುವಾಗ ಅವನ ಪೈಸೆಯ ಗೆಂಟು ಮಾಯ ಆಯಿದು.

ಛೆ! ಕಾಲಿ ಕೈಲಿ ಹೆಂಡತಿ ಮಕ್ಕಳ ಮೋರೆ ನೋಡುದು ಹೇಂಗೆ ಹೇಳಿ ಪುನಃ ಬೇರೆ ಊರಿಂಗೆ ಹೋಗಿ ಒಂದು ಸಾವಿರ ವರಹ  ಸಂಪಾದನೆ ಮಾಡಿ ಊರಿಂಗೆ ಬತ್ತ.ಈ ಸರ್ತಿ ಕಸ್ತಲೆ ಅಪ್ಪಗ ಒರಗದ್ದೆ ಕಾಯ್ತ.ನಡು ಇರುಳು ಅವನ ಕಣ್ಣಿಂಗೆ ಮತ್ತೆ ಕರ್ತ ಮತ್ತು ಕರ್ಮ ಮೊದಲಿನ ಹಾಂಗೆ ಮಾತಾಡುತ್ತವು,ಇವ ಗಟ್ಟಿಯಾಗಿ ಹಿಡುಕೊಂಡು ಇದ್ದ ಪೈಸೆಯ ಗೆಂಟು ಮಾಯಾ ಅವುತ್ತು.ಇವ ಭಾರೀ ಬೇಜಾರಾಗಿ ಅಲ್ಲಿಯೇ ಒಂದು ಮರಕ್ಕೆ ಬಳ್ಳಿ ಕಟ್ಟಿ ಕೊರಳಿಂಗೆ ಹಾಕಿಗೊಂಡು ಸಾವಲೆ ಹೆರಡುತ್ತ.ಅಷ್ಟಪ್ಪಗ ಕರ್ಮ ಬಂದು ನಿನಗೆ ಈ ಜನ್ಮಲ್ಲಿ ಇಷ್ಟೇ ಪ್ರಾಪ್ತಿ,ನಿನ್ನ ಪ್ರಯತ್ನಕ್ಕೆ ಮೆಚ್ಚಿದೆ ಇನ್ನು ನೀನು ಮನೆಗೆ ಹೋಗಿ ನೆಮ್ಮದಿಲಿ ಬದುಕು ಹೇಳಿ ಸಮಾಧಾನ ಮಾಡಿ ಕಳುಸಿದ. ಈ ಕಥೆಲಿ ಲಲಾಟ ಲಿಖಿತಾ ಲೇಖಾಂ ಪರಿಮಾರ್ಷ್ಟುಂ ನ ಶಕ್ಯತೇ|
ಹಣೆಲಿ ಬರದ್ದರ ಉದ್ದುಲೆ ಎಡಿಯ ಹೇಳುವ ಮಾತು ಬತ್ತು.


ಎಷ್ಟೋ ವಿಚಾರಂಗ ನಮ್ಮ ಕೈಲಿ ಇರುತ್ತಿಲ್ಲೆ.ಆದರೆ ನಾವು ಸಾಕಷ್ಟು ಪ್ರಯತ್ನಿಸುತ್ತು ,ಕೊನೆಗೆ ಯಾವುದೂ ಆಗದ್ದೆ ಅಪ್ಪಗ ನಮಗೆ ಒಂದು ವಿಚಾರ ಮನವರಿಕೆ ಆವುತ್ತು ,ಇದು ನಮ್ಮ ಕೈಲಿ ಇಲ್ಲೆ ಹೇಳಿ .ಯಾವುದೇ ಕೆಲಸ ಮನುಷ್ಯ ಪ್ರಯತ್ನ ಇಲ್ಲದ್ದೆ ಅವುತ್ತಿಲ್ಲೆ ನಿರಂತರ ಯತ್ನ ಬೇಕಾವುತ್ತು.ಸಾಕಷ್ಟು ಯತ್ನವ ಮಾಡಿಯೂ ನಮ್ಮದಲ್ಲದ ಕಾರಣಕ್ಕೆ ನಾವು ತೊಂದರೆಗೆ ಒಳಗಾವುತ್ತು ಎಷ್ಟೋ ಸರ್ತಿ ,ಎನಗೆ ಎಷ್ಟೋ ಸರ್ತಿ ಈ ಅನುಭವ ಅಯಿದು,ಬಹುಶ ಎಲ್ಲೋರಿಂಗು ಇದು ಅನುಭವಕ್ಕೆ ಬಕ್ಕು ಹೇಳಿ ಅನ್ಸುತ್ತು ಎನಗೆ.

ಅಂತ ಸಂದರ್ಭಲ್ಲಿ ನಮ್ಮ ಭಾಷೆಲಿ ಬಳಕೆ ಅಪ್ಪ ಮಾತು ಇದು.ದೇವರು ತಲೆಲಿ ಬರದ್ದರ ಎಲೆಲಿ ಉದ್ದುಲೆ ಎಡಿಯ ಹೇಳಿ .ದೇವರು ನಾವು ಮಾಡಿದ ಕರ್ಮಕ್ಕೆ ಅನುಗುಣವಾಗಿ ಅದರ ಬಲವಾಗಿ ಬರೆದಿರುತ್ತ.ಎಲೆ ಮೃದುವಾದ ಹರಿವ ವಸ್ತು ,ಇದರಲ್ಲಿ ರಜ್ಜ ಮಣ್ಣು ಧೂಳು ಆದ್ದರ   ಉದ್ದಿ ಸರಿ ಮಾಡುಲೆ ಎಡಿಗು ಆದರೆ ದೇವರು ತಲೆಲಿ ಬರದ್ದರ ಎಲೆಲಿ ಉದ್ದಿ ಸರಿಮಾಡುಲೆ ಎಡಿಯ.

ವಿಧಿಯ ಮುಂದೆ ಮನುಷ್ಯ ಯತ್ನ ಎಲೆಯಷ್ಟು ದುರ್ಬಲ ಹೇಳುದರ ಈ ನುಡಿಗಟ್ಟು ನಮ್ಮ ಭಾಷೆಲಿ ಇಪ್ಪ ತಿಳಿಸಿ ಕೊಡುತ್ತು.

No comments:

Post a Comment