Friday 21 December 2018

ಗಿಳಿಬಾಗಿಲು ಹವ್ಯಕ ನುಡಿಗಟ್ಟುಗಳು 55 ನಾಯಿ ಸಂತೆ ಇದ್ದವು © ಡಾ.ಲಕ್ಷ್ಮೀ ಜಿ ಪ್ರಸಾದ

ಗಿಳಿ ಬಾಗಿಲು- ನಾಯಿ ಸಂತೆ ಇದ್ದವು
ನಮ್ಮ ಭಾಷೆಲಿ ಬಳಕೆಲಿ ಇಪ್ಪ ತಿರಸ್ಕಾರದ ಮಾತಿದು. ಎಂತದಿದು ನಾಯಿ ಸಂತೆ ಇದ್ದವು ಹೇಳಿರೆ.
ಆನು ಸಂಸ್ಕೃತ ಎಂಎ ಓದುಲೆ ಹೆರಡುವಗ ಆನು ಈ ಮಾತಿನ ಕೇಳಕ್ಕಾಗಿ ಬಂತು.ಆದರೆ ನಾಯಿ ಸಂತೆ ಇದ್ದವು ಹೇಳಿರೆ ಎಂತದು ಹೇಳಿ ಅರ್ಥ ಆಗಿತ್ತಿಲ್ಲೆ. ಅವ ನಾತಿ ಸಂತೆ ತಿರುಗುತ್ತಾ ಹೇಳುವ ಮಾತುದೆ ಇದ್ದು.ಅವ ಬರೀ ತಿರ್ಗೇಲು ನಾಯಿ ಹೇಳುವ ಬೈಗಳಿನ ಮಾತುದೆ ನಮಯ ಭಾಷೆಲಿ ಇದ್ದು‌.ಹಾಂಗಾಗಿ
ಯಾವುದಾದರೂ ಸಂತೆ ಅಪ್ಪಗ ನಾಯಿಗ ಅಂತೇ ತಿರುಗಿಯೊಂಡು ಇರ್ತವು.ಅವಕ್ಕೆ ಅಲ್ಲಿ ಎಂತ ಕೆಲಸವೂ ಇಲ್ಲೆ‌.ಬಹುಶಃ ಈ ಅರ್ಥಲ್ಲಿ ಎಂಎ ಓದಿದೋರು ಕೆಲಸ ಇಲ್ಲದ್ದೆ ನಾಯಿಗ ಸಂತೆಲಿ ಅಂತೆ ತಿರುಗುವ ಹಾಂಗೆ ತಿರುಗುತ್ತಾ ಇದ್ದವು ಹೇಳುವ ಅರ್ಥ ಆದಿಕ್ಕು ಹೇಳಿ ಈಗ ಅನಿಸಿತ್ತು.ಆದರೆ ಎಂಎ ಹೇಳಿರೆ  ಆರ್ಟ್ಸ್ ಓದಿರೆ  ಪ್ರಯೋಜನ ಇಲ್ಲೆ ಕೆಲಸ ಸಿಕ್ಕುತ್ತಿಲ್ಲೆ ,ನಾಯಿ ಸಂತೆಲಿ ತಿರುಗುವ ಹಾಂಗೆ ತಿರುಗಕ್ಕಾವವುತ್ತು ಹೇಳುದು ತಪ್ಪು ಕಲ್ಪನೆ‌‌ .ಪ್ರತಿಭೆ,ಪರಿಶ್ರಮ ,ಪ್ರಾಮಾಣಿಕತೆ ಇದಗದರೆ ಅವರ ಅವಕಾಶಂಗ ಹುಡುಕಿಕೊಂಡು ಬತ್ತು ಹೇಳುದರಲ್ಲಿ ಎರಡು ಮಾತಿಲ್ಲೆ.
© ಡಾ‌.ಲಕ್ಷ್ಮೀ ಜಿ ಪ್ರಸಾದ

No comments:

Post a Comment