Saturday, 22 February 2020

ಹವ್ಯಕ ಗಾದೆಗ:59. ಹಾಲಿಂಗೆ ಹೋದವಂಗೆ ಎಮ್ಮೆಯ ಕ್ರಯ ಎಂತಕೆ ?: ಡಾ.ಲಕ್ಷ್ಮೀ ಜಿ ಪ್ರಸಾದ

ಈ ಗಾದೆಯ ಸಣ್ಣಾದಿಪ್ಪಗ ಎನ್ನ ಸಣ್ಣಜ್ಜ ( ಅಜ್ಜನ ತಮ್ಮ) ಆರಿಮಗೋ ಹೇಳುದರ ಕೇಳಿತ್ತಿದೆ.ಅವು ಹಳ್ಳಿ ಮದ್ದಿನ ಉಚಿತವಾಗಿ ಕೊಟ್ಟು ಗೊಂಡು ಇತ್ತಿದವು.ಅಂಬಗ ಆರಾದರೂ ಮದ್ದಿನ ಮೂಲದ ಬಗ್ಗೆ ಅಥವಾ ಇನ್ನೇನಾದರೂ ಕೇಳಿರೆ ಹಾಲಿಂಗೆ ಬಂದೋನಿಂಗೆ ಎಮ್ಮೆಯ ಕ್ರಯ ಎಂತಕೆ ಹೇಳಿ ಕೇಳುಗು.
ಅಪ್ಪು ನಮಗೆ ಸಂಬಂಧ ಪಡದ್ದ ವಿಚಾರಗಳಲ್ಲಿ ತಲೆ ಹಾಕುಲಾಗ.ನಮಗೆ ಬೇಕಾದ್ದು ಎಂತರ,ನಮ್ಮ ಕೆಲಸ ಎಂತದು ಅಷ್ಟನೇ ಮಾಡಕ್ಕುಬೇರೆಯೋರ ವೈಯಕ್ತಿಕ ವಿಚಾರಕ್ಕೆ ತಲೆ ಹಾಕುಲಾಗ ಹೇಳುದು ಇದರ ಅರ್ಥ.
ಎಂಗಳ ಮನೆ ಹತ್ರಣ ಅಜ್ಜಿ ಅಲ್ಲೇ ಇನ್ನೊಂದು ಮನೆಯ ಪಾತ್ರತೊಳವಲೆ ಉಡುಗುಲೆ ಉದ್ದುಲೆ ಹೋವುತ್ತು‌.ಯಾವಾಗಾದರೂ ಎಂಗಳ ಮನೆಗೆ ಬಂದು ಕಾಫಿ ಕುಡುದು ಸೊಸೆಯ ಕಾಟವ ಮಗ ಕುಡುದು ಆಸ್ತೆ ಎಲ್ಲಾ ಹಾಳು ಮಾಡಿ ಈ ಸ್ಥಿತಿಗೆ ತಂದದು ಇತ್ಯಾದಿ ಅದರ ಕಷ್ಟವ ಹೇಳಿಕ್ಕಿ ಹೋವುತ್ತು.ಇಂದು ಹಾಂಗೆ ಬಂದಿತ್ತು ‌ಮಾತಿನ ನಡುವೆ ಅದು ಕೆಲಸಕ್ಕೆ ಹೋಪ ಮನೆಲಿ ಸೊಸೆ ಆರು ಗಂಟೆಗೆ ಎದ್ದು ಅದರ ಊಟ ತಿಂಡಿ ತಿಂದು ಕೆಲಸಕ್ಕೆ ಹೋವುತ್ತು‌.ಮಗ ಎಂಟು ಗಂಟೆಗೆ ಏಳುದು‌.ಅವನ ಹೆಂಡತಿ ಎಬ್ಬುಸಡದಾ ? ಹಾಂಗೆ ಹೋಪದು ಸರಿಯಾ ಕೇಳಿತ್ತು‌.
ಅಂಬಗ ಈ ಗಾದೆ ನೆಂಪಾಗಿ ಅದಕ್ಕೆ ಹೇಳಿದೆ.ನೋಡಜ್ಜಿ ನೀನು ಹೋದ್ದು ಅವರ ಮನೆ ಕೆಲಸಕ್ಕೆ.ಬೇರೆ ವಿಚಾರ ನಿನಗೆಂತಕೆ? ಸಂಬಳ ಕೊಡ್ತವನ್ನೆ, ಅವರ ಮನೆಯ ಶಿಸ್ತಿನ ವಿಚಾರ ನೋಡಿಗೊಂಬಲೆ ನಿನ್ನ ದೆನಿಗೇಳಿದ್ದಲ್ಲಾ? ಅವರ ಮನೆ ವಿಚಾರಕ್ಕೆ ಬಾಯಿ ಹಾಕಿರೆ ನಿನ್ನ ಕೆಲಸಕ್ಕೆ ಬರಡ ಹೇಳ್ತವಷ್ಟೇ ಹೇಳಿ,ಹಾಲಿಮಗೆ ಹೋದೋನಿಂಗೆ ಎಮ್ಮೆಯ ಕ್ರಯ ಎಂತಕೆ ಹೇಳುವ ಗಾದೆಯೇ ಇದ್ದು ಹೇಳಿ ವಿವರಿಸಿದೆ.
ಕೆಲಸಕ್ಕೆ ಹೋಪ ಮನೆಯ ಬಗ್ಗೆ ಬೇರೆ ಕಡೆಲಿ ಮಾತನಾಡುಲಾಗ ಅವರ ವೈಯಕ್ತಿಕ ವಿಚಾರಕ್ಕೆ ತಲೆ ಹಾಕುಲಾಗ ಹೇಳಿದೆ.ಆಯ್ತವ್ವಾ ನನಗೆ ಅದು ಗೊತ್ತಾಗಿಲ್ಲ ಹೇಳಿ ಒಪ್ಪಿಕ್ಕಿ ಹೋತು‌.
ಇದೊಂದು ಉದಾಹರಣೆ ಅಷ್ಟೇ, ತುಂಬಾ ಜನ ಕೆಲಸ ಮಾಡು ಲ್ಲಿ ಅಜ್ಜಿ ಮಾಡುವ ತಪ್ಪಿನ ಮಾಡ್ತವು.ತಮ್ಮದಲ್ಲದ ಕೆಲಸಲ್ಲಿ ಬಾಯಿ ಹಾಕಿ ಅಧಿಕ ಪ್ರಸಂಗ ಮಾಡಿ ಕೆಲಸ ಕಳಕೊಂಬೋರು ಕೂಡ ಇದ್ದವು.
ಹಾಂಗಾಗಿ ಯಾವಾಗಲೂ ಈ ಗಾದೆಯ ನೆನಪಿಲಿ ಮಡಿಕ್ಕೊಂಬದು ಒಳ್ಳೆದು ಹೇಳಿ ಎನಗೆ ಅನ್ಸುತ್ತು
ಡಾ‌‌.ಲಕ್ಷ್ಮೀ ಜಿ ಪ್ರಸಾದ.
ಕನ್ನಡ ಉಪನ್ಯಾಸಕರು
ಸರ್ಕಾರಿ ಪಿಯು ಕಾಲೇಜು.
ಬ್ಯಾಟರಾಯನಪುರ
ಬೆಂಗಳೂರು

ಹವ್ಯಕ ಗಾದೆಗಳು:60 ಆಲದ ಮರ ಬೇರೆ ಸೆಸಿಗಳ ಕೊಡಿಪ್ಪುಲೆ ಬಿಡ್ತಿಲ್ಲೆ

ಹವ್ಯಕ ಗಾದೆಗಳು:60 ಆಲದ ಮರ ಬೇರೆ ಸೆಸಿಗಳ ಕೊಡಿಪ್ಪುಲೆ ಬಿಡ್ತಿಲ್ಲೆ- ಡಾ.ಲಕ್ಷ್ಮೀ ಜಿ ಪ್ರಸಾದ
ಇದೊಂದು ಹವ್ಯಕ  ಗಾದೆ ಮಾತಿನಸಣ್ಣಾಪಿದ್ದಗಳೇ ಕೇಳಿತ್ತಿದೆ.
ಆದರೆ ಅದೆಂತದು ಹೇಳಿ‌ಮನವರಿಕೆ ಆಗಿತ್ತಿಲ್ಲೆ.
ಆಲದ ದಟ್ಟವಾಗಿ ವಿಸ್ತಾರವಾಗಿ ಬೆಳದು ಕೊಂಡು ಹೋವುತ್ತು.ಬಂದೋರಿಂಗೆ ಕೂಪಲೆ ನೆರಳು ಕೊಡ್ತು ,ಜಾಗೆ ಕೊಡ್ತು.ಅದರ ಗೆಲ್ಲುಗಳಲ್ಲಿ ಪಕ್ಷಿಗ ಗೂಡು ಕಟ್ಟಿ ಬದುಕುತ್ತವು.ಎಲ್ಲ ಸಮ,ಆದರೆ ಆಲದ ಮರ ಬೇರೆ ಸೆಸಿಗಳ ಬೆಳವಲೆ ಬಿಡ್ತಿಲ್ಲೆ .ತಾನು ಮಾತ್ರ ಬೆಳೆತ್ತಾ ಹೋವುತ್ತು.ಬೇರೆ ಗಿಡ ಮರಂಗೊಕ್ಕೆ ಬೆಳವಲೆ ಅವಕಾಶ ಕೊಡ್ತಿಲ್ಲೆ.
ಇದು ದೊಡ್ಡೋರ ಸಣ್ಣತನವ ವಿವರಿಸುಲೆ ಗಾದೆಯಾಗಿ ಬಳಕೆ ಅವುತ್ತು.
ಬೇರೆ ಬೇರೆ ಕ್ಷೇತ್ರಲ್ಲಿ ಸಾಧನೆ ಮಾಡಿದ ದೊಡ್ಡ ದೊಡ್ಡ ಹೆಸರು ಮಾಎಇದ ವಿದ್ವಾಂಸರುಗ ಇದ್ದವು.ಇವಕ್ಕೆ ಇವರ ಹೆರಿಯೋರು ಬೆಂಬಲ ಕೊಟ್ಟಿದವು ಹಾಂಗಾಗಿ ಇವಕ್ಕೆ ಸಾಧನೆ ಮಾಡುಲೆ ಎಡಿಗಾತು.ಆದರೆ ಈ ವಿದ್ವಾಂಸುಗ ತನ್ನಂದ ಸಣ್ಣ ಪ್ರಾಯದ ಸಾಧನೆಯ ಹಾದಿಲಿ ನಡವೋರ ಸಂಪೂರ್ಣ ವಾಗಿ  ಅಲ್ಲೇ ಚಿವುಟಿ ಹಾಕುತ್ತವು.ಇವಕ್ಕೆ ಹೆಸರಿಕೆ ..ಸಣ್ಣೋವು ಬೆಳದು ಇವರ ಸಮಕ್ಕೆ ನಿಂದರೆ ಹೇಳಿ.ಬೇರೆಯೋರ ಗೆಲುವಿನ ತನ್ನ ಸೋಲು ಹೇಳಿ ಭಾವಿದುವ ಮಂದಿದೆ ಇದ್ದವು.
ಅದಕ್ಕಾಗಿ ಬೇರೆಯೋರ ಹತ್ತರೆ ಬಹಳ ಸಂಭಾವಿತರ ಹಾಂಗೆ ತೋರ್ಸಗೊಂಬ ಇಂತೋವು ಬೆಳವ ಯತ್ನ ಮಾಡುವೋರ ಬುಡ ಸಮೇತ ಪೊರ್ಪಿ ನಾಶ ಮಾಡುಲೆ ಯತ್ನ ಮಾಡುತ್ತವು.
ಇಂತೋರ ಬಗ್ಗೆ ಹೇಳುವಗ ಆಲದರ ಬೇರೆ ಸೆಸಿಗಳ ಕೊಡಿಪ್ಪುಲೆ ಬಿಡ್ತಿಲ್ಲೆ ಹೇಳುವ ಗಾದೆಯ ಬಳಕೆ ಮಾಡುತ್ತವು.
ನಿಂಗಳ ಕಡೆಲಿದೆ ಈ ರೀತಿಯ ಗಾದೆ ಬಳಕೆಲಿ ಇಕ್ಕು ಅಲ್ಲದಾ ? ಇದ್ದರೆ ತಿಳುಸಿ ಅತಾ
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕಿ
ಸರ್ಕಾರಿ ಪಿಯು ಕಾಲೇಜು
ಬ್ಯಾಟರಾಯನಪುರ
ಬೆಂಗಳೂರು