Saturday 22 February 2020

ಹವ್ಯಕ ಗಾದೆಗಳು:60 ಆಲದ ಮರ ಬೇರೆ ಸೆಸಿಗಳ ಕೊಡಿಪ್ಪುಲೆ ಬಿಡ್ತಿಲ್ಲೆ

ಹವ್ಯಕ ಗಾದೆಗಳು:60 ಆಲದ ಮರ ಬೇರೆ ಸೆಸಿಗಳ ಕೊಡಿಪ್ಪುಲೆ ಬಿಡ್ತಿಲ್ಲೆ- ಡಾ.ಲಕ್ಷ್ಮೀ ಜಿ ಪ್ರಸಾದ
ಇದೊಂದು ಹವ್ಯಕ  ಗಾದೆ ಮಾತಿನಸಣ್ಣಾಪಿದ್ದಗಳೇ ಕೇಳಿತ್ತಿದೆ.
ಆದರೆ ಅದೆಂತದು ಹೇಳಿ‌ಮನವರಿಕೆ ಆಗಿತ್ತಿಲ್ಲೆ.
ಆಲದ ದಟ್ಟವಾಗಿ ವಿಸ್ತಾರವಾಗಿ ಬೆಳದು ಕೊಂಡು ಹೋವುತ್ತು.ಬಂದೋರಿಂಗೆ ಕೂಪಲೆ ನೆರಳು ಕೊಡ್ತು ,ಜಾಗೆ ಕೊಡ್ತು.ಅದರ ಗೆಲ್ಲುಗಳಲ್ಲಿ ಪಕ್ಷಿಗ ಗೂಡು ಕಟ್ಟಿ ಬದುಕುತ್ತವು.ಎಲ್ಲ ಸಮ,ಆದರೆ ಆಲದ ಮರ ಬೇರೆ ಸೆಸಿಗಳ ಬೆಳವಲೆ ಬಿಡ್ತಿಲ್ಲೆ .ತಾನು ಮಾತ್ರ ಬೆಳೆತ್ತಾ ಹೋವುತ್ತು.ಬೇರೆ ಗಿಡ ಮರಂಗೊಕ್ಕೆ ಬೆಳವಲೆ ಅವಕಾಶ ಕೊಡ್ತಿಲ್ಲೆ.
ಇದು ದೊಡ್ಡೋರ ಸಣ್ಣತನವ ವಿವರಿಸುಲೆ ಗಾದೆಯಾಗಿ ಬಳಕೆ ಅವುತ್ತು.
ಬೇರೆ ಬೇರೆ ಕ್ಷೇತ್ರಲ್ಲಿ ಸಾಧನೆ ಮಾಡಿದ ದೊಡ್ಡ ದೊಡ್ಡ ಹೆಸರು ಮಾಎಇದ ವಿದ್ವಾಂಸರುಗ ಇದ್ದವು.ಇವಕ್ಕೆ ಇವರ ಹೆರಿಯೋರು ಬೆಂಬಲ ಕೊಟ್ಟಿದವು ಹಾಂಗಾಗಿ ಇವಕ್ಕೆ ಸಾಧನೆ ಮಾಡುಲೆ ಎಡಿಗಾತು.ಆದರೆ ಈ ವಿದ್ವಾಂಸುಗ ತನ್ನಂದ ಸಣ್ಣ ಪ್ರಾಯದ ಸಾಧನೆಯ ಹಾದಿಲಿ ನಡವೋರ ಸಂಪೂರ್ಣ ವಾಗಿ  ಅಲ್ಲೇ ಚಿವುಟಿ ಹಾಕುತ್ತವು.ಇವಕ್ಕೆ ಹೆಸರಿಕೆ ..ಸಣ್ಣೋವು ಬೆಳದು ಇವರ ಸಮಕ್ಕೆ ನಿಂದರೆ ಹೇಳಿ.ಬೇರೆಯೋರ ಗೆಲುವಿನ ತನ್ನ ಸೋಲು ಹೇಳಿ ಭಾವಿದುವ ಮಂದಿದೆ ಇದ್ದವು.
ಅದಕ್ಕಾಗಿ ಬೇರೆಯೋರ ಹತ್ತರೆ ಬಹಳ ಸಂಭಾವಿತರ ಹಾಂಗೆ ತೋರ್ಸಗೊಂಬ ಇಂತೋವು ಬೆಳವ ಯತ್ನ ಮಾಡುವೋರ ಬುಡ ಸಮೇತ ಪೊರ್ಪಿ ನಾಶ ಮಾಡುಲೆ ಯತ್ನ ಮಾಡುತ್ತವು.
ಇಂತೋರ ಬಗ್ಗೆ ಹೇಳುವಗ ಆಲದರ ಬೇರೆ ಸೆಸಿಗಳ ಕೊಡಿಪ್ಪುಲೆ ಬಿಡ್ತಿಲ್ಲೆ ಹೇಳುವ ಗಾದೆಯ ಬಳಕೆ ಮಾಡುತ್ತವು.
ನಿಂಗಳ ಕಡೆಲಿದೆ ಈ ರೀತಿಯ ಗಾದೆ ಬಳಕೆಲಿ ಇಕ್ಕು ಅಲ್ಲದಾ ? ಇದ್ದರೆ ತಿಳುಸಿ ಅತಾ
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕಿ
ಸರ್ಕಾರಿ ಪಿಯು ಕಾಲೇಜು
ಬ್ಯಾಟರಾಯನಪುರ
ಬೆಂಗಳೂರು

No comments:

Post a Comment