Saturday 6 January 2024

ಗಿಳಿ ಬಾಗಿಲು ಹವ್ಯಕ ಕನ್ನಡ ನುಡಿಗಟ್ಟುಗಳು 61ಮೂಗಿಲಿ ಎಷ್ಟು ಉಂಬಲೆಡಿಗು?

 ದೊಡ್ಡ ಕೆಲಸದಲ್ಲಿ ಜವಾಬ್ದಾರಿಲಿ ಇಪ್ಪೋರ ಸಣ್ಣ ಪುಟ್ಟ ವಿಷಯದಲ್ಲಿ ಮಾಡುವ ಮೋಸದ ನಿರರ್ಥಕತೆ ಬಗ್ಗೆ ವಿವರಿಸುವ ಗಾದೆ ಇದು

ಎನ್ನ ಒಬ್ಬ ಹಳೆಯ ಪ್ರತಿಭಾವಂತ ವಿದ್ಯಾರ್ಥಿ ಗೆ ತಿಂಗಳಿಗೆ ಒಂದು ಲಕ್ಷ ಸಂಬಳದ ಕೆಲಸ ಇತ್ತು.ಇವ ಕಂಪೆನಿಗೆ 50,000₹ಮೋಸ ಮಾಡಿ ಲಕ್ಷ ಸಂಬಳದ ಕೆಲಸ ಕಳಕೊಂಡ.

ಇದೇ ರೀತಿ ಖಾಸಗಿ ಸಂಸ್ಥೆಲಿ ಕ್ಲಾರ್ಕ್ ಆಗಿ ಕೆಲಸ ಮಾಡುತ್ತಿದ್ದ ಎನ್ನ ಪರಿಚಯದ ವ್ಯಕ್ತಿ ಕಾಫಿಗೆ ತೋರಿಸಿದ ಬಿಸ್ಕೆಟ್ ಗೆ ಪ್ಯಾಕ್ ಗೆ ಒಂದು ರುಪಾಯಿ ಹೆಚ್ಚು ಬಿಲ್ ಹಾಕಿ ಸಿಕ್ಕಾಕೊಂಡು ಕೆಲಸ ಕಳಕೊಂಡ ಇ

ಹೆಚ್ಚು ದಿನ ಮೋಸ ಮಾಡುಲೆ ಎಡ್ತಿಲ್ಲೆ.. ಹಾಂಗೆ ಇಪ್ಪಗ ಸಣ್ಣ ಪುಟ್ಟ ವಿಷಯಲ್ಲಿ ಮೋಸ ಮಾಡುವುದು ವ್ಯರ್ಥ.ಇದರಂದ ಪೈಸೆ ಮಾಡುಲೆ ಅಸಾಧ್ಯ ಹೇಳಿ ಈ ಗಾದೆ ಮಾತು ತಿಳಿಸುತ್ತು

ಅಂಬಗ ಮೂಗಿಲಿ ಎಷ್ಟು ಉಂಬಲೆಡಿಗು? ನಾಕು ಅಶನ  ಕೂಡ ಎಡಿಯ..ಹಾಂಗೆ ಸಣ್ಣ ಪುಟ್ಟ ಮೋಸ ಮಾಡಿ ಎಷ್ಟು ಗಳಿಸುಲೆಡಿಗು? ಒಂದಲ್ಲ ಒಂದು ದಿನ ಸಿಕ್ಕಾಕೊಂಡು ಹೆಸರು ಜೊತೆಗೆ ಕೆಲಸವ ಕಳಕೊಳ್ಳಕ್ಕಾವುತ್ತು ಖಂಡಿತಾ

ಹಾಂಗಾಗಿ ಯಾವಾಗಲೂ ಪ್ರಾಮಾಣಿಕರಾಗಿ ಇರೆಕ್ಕು.ಆರಿಂಗೂ ಮೋಸ ಮಾಡುಲಾಗ,.ಮಾಡಿರೆ ನಮ್ಮ ವ್ಯಕ್ತಿತ್ವಕ್ಕೆ ದೊಡ್ಡ  ಪೆಟ್ಬು ಬೀಳುತ್ತದೆ ಖಂಡಿತಾ 

No comments:

Post a Comment