Sunday 4 August 2013

ಗಿಳಿ ಬಾಗಿಲು-ಅವ ಹುಳಿ ಬಂದು ಮೊಗಚ್ಚಿದ್ದ

ಗಿಳಿ ಬಾಗಿಲು-ಅವ ಹುಳಿ ಬಂದು ಮೊಗಚ್ಚಿದ್ದ
ಎನ್ನ ಅಮ್ಮಎನಗೆ ಅಮ್ಮ ಮಾತ್ರ ಅಲ್ಲ ಒಳ್ಳೆಯ ಫ್ರೆಂಡ್ ಕೂಡಾ ! ಫ್ರೆಂಡ್ ಗಳ ಹತ್ತರೆ ಗಂಟೆ ಗಟ್ಲೆ ಪಟ್ಟಾಂಗ ಹೊಡವ ಹಾಂಗೆ ಎಂಗ ಹೇಳಿರೆ ಆನುದೇ ಅಮ್ಮಂದೆ ಪಟ್ಟಾಂಗ ಹೊಡೆತ್ತೆಯ.ಎಂಗಳ ಮಾತು ಕತೇಲಿ ಆನು ಓದಿದ ಕಥೆ ಲೇಖನದ ಬಗ್ಗೆ ಚರ್ಚೆ ,ಆನು ಬರದ ಲೇಖನದ ಬಗ್ಗೆ ಆರು ಎಂತ ಹೇಳಿದವು ಹೇಳುವ ವಿಚಾರ ಹಾಂಗೆ ಅಮ್ಮಂಗೆ ಊರಿಲಿ ಸಿಕ್ಕ ವಿಚಾರ ಆರಿಂಗೋ ಮದುವೆ ನಿಘಂಟು ಆದ್ದು ,ಆರೋ ಅಪರೂಪಲ್ಲಿ ಹೆತ್ತದು ಹೀಂಗೆ ಸುಮಾರು ವಿಚಾರಂಗ ಇರ್ತು .ಹೀಂಗೆ ಮೊನ್ನೆ ಒಂದಿನ ಅಮ್ಮ್ಮಂದೆ ಆನುದೆ ಮಾತಾಡ್ತಾ ಇಪ್ಪಗ ಆರೋ ಒಬ್ಬನ ಬಗ್ಗೆ ವಿಚಾರ ಬಂತು.ಆವ ತುಂಬಾ ಒಳ್ಳೆಯ ಕೆಲಸಲ್ಲಿ ಇಪ್ಪೋನು .ಉಪಕಾರಿ ,ಸಹೃದಯಿ ಕೂಡಾ .ಆದರೆ ರಜ್ಜ ತೋರ್ಸಿಗೊಂಬ ಸ್ವಭಾವ .ತಾನು ಮಹಾ ಬ್ಯುಸಿ ,ಬುದ್ದಿವಂತ ಹೇಳುವ ಹಾಂಗೆ ,ಎನಗೆ ಮಾತಾಡಲೇ ಪುರುಸೊತ್ತು ಇಲ್ಲೇ ಎನ್ಗೊಗೆ ಸಮಯ ಭಾರಿ ಮುಖ್ಯ ಹೇಳಿಗೊಂಡು ಅಮ್ಮನತ್ರೆ ಆವ ಗಂಟೆ ಗಟ್ಲೆ ಮಾತಾಡಿದ ಅಡ !!ಈ  ಬಗ್ಗೆ ಅಮ್ಮ ಹೇಳುವಗ "ಅವ ಹುಳಿ ಬಂದು ಮೊಗಚ್ಚಿದ್ದ " ಹೇಳಿ ಹೇಳಿದ !ಎಷ್ಟು ಚೆಂದದ ಭಾಷಾ ಪ್ರಯೋಗ ಅಲ್ಲದ ? ಉದ್ದಿನ ದೋಸೆಗೆ ಅಕ್ಕಿ ಕಡದು ಮಡುಗಿದ್ದು ಮರದಿನಕ್ಕೆ  ಹುಳಿ ಬರಕ್ಕು.ಇಲ್ಲದ್ದರೆ ದೋಸೆ ಮೆಸ್ತಂಗೆ ಆವುತ್ತಿಲ್ಲೆ .ಅದು ಗಟ್ಟಿಯಾಗಿ ಬಲ್ಚಟ್ಟಿ ನ ಹಾಂಗೆ ಆವುತ್ತು .ಹಾಂಗಾಗಿ ಲಾಯ್ಕಕ್ಕೆ ಹುಳಿ ಬರಕ್ಕು ಹೇಳಿ ಬೆಚ್ಚಂಗೆ ಒಲೆಕಟ್ಟೆಲಿ ಮಡುಗುದು ಕ್ರಮ . ಕೆಲವು ಸರ್ತಿ ಜಾಸ್ತಿ ಹುಳಿ ಬತ್ತು . ತುಂಬಾ ಜಾಶ್ತಿ ಹುಳಿ ಬಂದರೆ ಹಿಟ್ಟು ಉಬ್ಬಿ ಮೇಲೆ ಬಂದು ಪಾತ್ರಕ್ಕೆ ಮುಚ್ಚಿದ ಮುಚ್ಚೆಲಿನ ನೂಕಿ ಹಿಟ್ಟೆಲ್ಲ ಹೆರ ಬಂದು ಚೆಲ್ಲುತ್ತು !ಇದಕ್ಕೆ ಹುಳಿ ಬಂದು ಮೊಗಚ್ಚುದು ಹೇಳಿ ಹೇಳುದು ! ಇದರ ಮನುಷ್ಯರ ಸ್ವಭಾವದ ಬಗ್ಗೆ ಹೇಳುವಗ  ಎಂಗಳ ಭಾಷೆಲಿ  ನುಡಿಗಟ್ಟು  ಆಗಿ ಬತ್ತು .ಎಷ್ಟು ಸಹಜವಾದ ಉಪಮೆ ,ಪ್ರತಿಮೆ ಅಲ್ಲದ ?! ಇಂತ  ಚೆಂದದ ಪದಂಗ ಎಂಗಳ ಭಾಷೆಲಿ ತುಂಬಾ  ಇದ್ದು .ನೆನೆಪ್ಪಾದಪ್ಪಗ ,ಪುರುಸೊತ್ತು ಸಿಕ್ಕಿಯಪ್ಪಗ ಬರೆತ್ತೆ ,ಓದಿ ನಿಂಗ ಅಭಿಪ್ರಾಯ ತಿಳಿಸಿ ಇನ್ನೊಂದರಿ ಕಾಂಬ ,ನಮಸ್ಕಾರ
 

5 comments:

  1. This comment has been removed by the author.

    ReplyDelete
  2. ಅಪ್ಪು ಭಾಷೆಗಳಲ್ಲಿ ಹೀಂಗಿಪ್ಪ ಶಬ್ಧ ಪ್ರಯೋಗಂಗ ಹೇಳಿದ್ದರ ಕೂಡ್ಲೇ ಅರ್ಥ ಮಾಡ್ಸುತ್ತು ವಿವರಣೆಗಳ ಅಗತ್ಯವಿಲ್ಲದೆ ಅಲ್ಲದಾ.. ಊರಿಗೊಂದು ದಾರಿ ಆದರೆ ಪೋರಂಗೊಂದು ದಾರಿ ಹೇಳಿ ಸಣ್ಣ ಮಕ್ಕಳ ಲೂಟಿಗೆ ಅಜ್ಜಿಯಕ್ಕ ಬಯ್ತಾ ಇರ್ತವಲ್ಲದಾ.. ಲಾಯ್ಕಕ್ಕೆ ಬರದ್ದಿ ನಿಂಗ :)

    ReplyDelete
  3. ಅಪ್ಪು ಇಂತ ಚೆಂದದ ನುಡಿಗಟ್ಟುಗ ನಮ್ಮ ಭಾಷೇಲಿ ತುಂಬಾ ಇದ್ದು ,ಓದಿ ಅಭಿಪ್ರಾಯಿಸಿದ್ದಕ್ಕೆ ಧನ್ಯವಾದಂಗ

    ReplyDelete
  4. ಭಾರೀ ಚೆ೦ದದ ನುಡಿಗಟ್ಟು,ಅಪ್ರೂಪದ್ದೂ..ವಿವರಣೆ ಲಾಯ್ಕ ಆಯಿದು.ಧನ್ಯವಾದ Raghu Muliya

    ReplyDelete
  5. ಓದಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಂಗ

    ReplyDelete