Thursday 15 August 2013

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-ಅವ ಮಹಾ ತೆಗಲೆ ಕಂಠ

                                                    
"ಅವ ಎಂತಕ್ಕೂ ಆಗ ,ಮಹಾ ತೆಗಲೆ ಕಂಠ " ಈ ಮಾತಿನ ಎಂಗಳ ಕಡೆ ತುಂಬಾ ಸತ್ತಿ ಕೇಳಿದ್ದೆ ಆನು .ಎಂತ ಕೆಲಸವನ್ನೂ ಸಸೂತ್ರ ಮಾಡದ್ದೋರ ಬಗ್ಗೆ ಮಾತಾಡುವಗ ಈ ಮಾತಿನ ಹೇಳ್ತವು .ಸಾಮಾನ್ಯವಾಗಿ ತುಂಬಾ ಉದಾಸೀನ ಪ್ರವೃತ್ತಿಯ ಸೋಮಾರಿಗಳ ಸ್ವಭಾವವ ಈ ಮಾತು ಸೂಚಿಸುತ್ತು.ಇದು ತುಳುವಿಲಿ ಕೂಡ ಚಾಲ್ತಿಲಿ ಇದ್ದು . ತುಳುವಿಲಿ ತಿಗಲೆ ಕಂಟೆ  ಹೇಳಿ ಉದಾಸೀನದ ಮುದ್ದೆಗಳ ಬೈತ್ತವು .ಈ ನುಡಿಗಟ್ಟಿನ ಆನು ಸಣ್ಣಾ ದಿಪ್ಪಗಂದ ಕೇಳುತ್ತಾ ಬಂದಿದ್ದರೂ ಇದರ ಅರ್ಥ ಎಂತ ಹೇಳಿ ಎನಗೆ ತಲೆಗೆ ಹೋಗಿತ್ತಿಲ್ಲೆ .ಆ ಬಗ್ಗೆ ತಲೆ ಕೆಡುಸುಲೆ ಹೋಗಿಯೂ ಇತ್ತಿಲ್ಲೆ ಹೇಳುದು ಬೇರೆ ವಿಚಾರ .ಇಂದು ಸ್ವಾತಂತ್ರ್ಯೋತ್ಸವ ಎಲ್ಲರಿಂಗು ಗೊಂತಿದ್ದನ್ನೆ .ಎಲ್ಲ ಶಾಲಾ ಕಾಲೇಜುಗಳಲ್ಲಿ ಉದಿಯಪ್ಪಗ ಒಂಬತ್ತು ಗಂಟೆ ಒಳ ಧ್ವಜಾರೋಹಣ ಮಾಡಿ ಉತ್ಸವ ಆಚರಣೆ ಮಾಡುತ್ತವು ,ಮಾಡಕ್ಕಾದ್ದೆ ಅನ್ನೆ !
ವಿಷಯ ಅದಲ್ಲ ! ಆನುದೆ ಇಂದು ಉದಿಯಪ್ಪಗ ಬೇಗ 8 ಗಂಟೆಗೆ ಎತ್ತಕ್ಕಾದ ಕಾರಣ ಬೇಗ ಎದ್ದು ೬ ಗಂಟೆಗೆ ಬಸ್ಸು ಹತ್ತಿದೆ .ಎನ್ನ ಹಾಂಗೆ ದೂರಂದ ಶಾಲೆ ಕಾಲೇಜಿನ್ಗೆ ಹೋಗಿ ಬಪ್ಪ  ಸುಮಾರು  ಜನಂಗ ಮಾಸ್ತ್ರಕ್ಕ ಟೀಚರುಗ ಆ ಬಸ್ಸಿಲಿ  ಇತ್ತಿದವು .ಎಲ್ಲರೂ ಎನ್ನ ಹಾಂಗೆ ಉದಿಯಪ್ಪಗ ೪-೫ ಗಂಟೆಗೆ ಎದ್ದು ತಯಾರಾಗಿ ೬  ಗಂಟೆಗೆ ಬಸ್ಸು ಹತ್ತಿದೊರು .ಬೆಂಗಳೂರಿಂದ ದೊಡ್ಡ ಬಳ್ಳಾಪುರ ಹೋಪಲೆ ಸುಮಾರು ಒಂದು ಒನ್ದೂವರೆ ಗಂಟೆ ಬೇಕಾವುತ್ತು .ಆ ಬಸ್ಸಿಲಿದ್ದೊರು ಹೆಚ್ಚಿನೋರು ದೊಡ್ಡ ಬಲ್ಲಾಪುರಕ್ಕೆ ಹೊಪೋರು .ಬಸ್ಸು ಹೆರಟು ೫-೧೦ ನಿಮಿಷಕ್ಕೆ ಎಲ್ಲರೂ ಚಂದಕ್ಕೆ ಬಸ್ಸಿಲಿಯೇ ಒರಗಿದವು !ಎನಗೆ ಬಸ್ಸಿಲಿ ಜಪ್ಪಯ್ಯ ಹೇಳಿರೂ ಒರಕ್ಕು ಬತ್ತಿಲ್ಲೆ .ಹಾಂಗೆ ಅಲ್ಲಿ ಇಲ್ಲಿ ಗೆಬ್ಬಾಯಿಸಿಕೊಂಡು ಇತ್ತಿದೆ.ಹಾಂಗೆ ಎಲ್ಲ ಕಡೆ ನೋಡುವಗ ಅಕ್ಕ ಪಕ್ಕ ಸುತ್ತ ಮುತ್ತ ಇಪ್ಪೋರೆಲ್ಲ ಒರಗಿದ್ದವು ! ಎಲ್ಲರ ಮೋರೆ (ಗಡ್ಡ )ಎದೆಗೆ ತಾಗಿಕೊಂಡು ಇದ್ದು !!ಕೂಡ್ಲೆ ಜ್ಞಾನೋದಯ ಆತು ,ತೆಗಲೆ ಕಂಠ ಹೇಳಿರೆ ಎಂತ ಹೇಳಿ ತಲೆಗೆ ಹೋತು !ತೆಗಲೆ=ಎದೆ ,ಕಂಠ =ಕೊರಳು ,ಕೊರಳು ಎದೆಗೆ ಬಗ್ಗಿ ಒರಗಿಕೊಂಡು ಇಪ್ಪದಕ್ಕೆ ತೆಗಲೆ ಕಂಠ ಹೇಳುದು !ಯಾವ ಕೆಲಸವೂ ಮಾಡದ್ದೆ ಉದಾಸೀನಂದ ಒರಕ್ಕು ತೂಗಿಕೊಂಡು ಇಪ್ಪೋರಿನ್ಗೆ ಒಪ್ಪುವ ಮಾತಿದು ,ಉದಾಸೀನದ ಮುದ್ದೆಗಳ ಬಗ್ಗೆ ಹೇಳುಲೇ ಇದಕ್ಕಿಂತ ಚಂದದ ಪದ ಬೇರೆಲ್ಲ್ಲಿಯೂ ಸಿಕ್ಕ ,ನಿಂಗ ಎಂತ ಹೇಳ್ತೀರಿ ?ನಿಂಗಳ ಅಭಿಪ್ರಾಯ ತಿಳುಸಿ
,ಇನ್ನೊಂದರಿ ಕಾಂಬ ,
                                                    ನಮಸ್ಕಾರ  
                                                                                               
                                                                             ಡಾ. ಲಕ್ಷ್ಮೀ ಜಿ ಪ್ರಸಾದ

2 comments:

  1. ನಮಸ್ಕಾರ ಲಕ್ಷ್ಮಿ ಅಕ್ಕ. ಈ ಮಾತು ಆನು ಸುರು ಕೇಳುತ್ತಾ ಇಪ್ಪದು. ಮದಲೇ ಬರದ ಅವ ಮುಂಡೆಂಗೂ ಕುಜುವೆ ಹೇಳುವ ಗಾದೆಯುದೆ ಸುರುವಿಂಗೆ ಕೇಳುತ್ತಾ ಇಪ್ಪದು.
    ನಿಂಗೊಗೆ - ಅಜ್ಜಿ ದಡ್ಡನಾಂಗೆ ಮಾಡೆಡ - ಹೇಳಿಪ್ಪ ವಾಕ್ಯ ಗೊಂತಿದ್ದ.....
    ಆಶಾಕಿರಣ.
    http://devaramathu.blogspot.in/

    ReplyDelete
    Replies
    1. ನಮಸ್ತೆ ,ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಂಗ ,ಅಜ್ಜಿ ದಡ್ಡನಾನ್ಗೆ ,ಎರು ದಡ್ಡ ಹೇಳುವ ಮಾತುಗಾ ಎಂಗಳ ಕಡೆಲಿದೆ ಇದ್ದು. ಇದಕ್ಕೆ ಸಮಾನವಾಗಿ ಏಬ್ಯ ಹೇಳುವ ಪದ ಬಳಕೆಯೂ ಇದ್ದು ಹೀಂಗೆ ತುಂಬಾ ಚಂದದ ನುಡಿಗಟ್ಟುಗ ನಮ್ಮಲ್ಲಿ ಇದ್ದು. ಇತ್ತೀಚೆಗೆ ಅದರ ಬದಲಿನ್ಗೆ ಇಂಗ್ಲಿಷ್ ಹಾಗು ಇತರ ಪದ ಬಳಕೆಗ ಬತ್ತಾ ಇದ್ದು ಅಲ್ಲದ ?

      Delete