Sunday 14 July 2019

ಗಿಳಿಬಾಗಿಲು :ಹವ್ಯಕ ನುಡಿಗಟ್ಟು 58 ಹೆಜ್ಜೆಲಿ ಬಿದ್ದ ನೆಳವಿನ ಹಾಂಗೆ © ಡಾ.ಲಕ್ಷ್ಮೀ ಜಿ ಪ್ರಸಾದ

ಹೆಜ್ಜೆಲಿ ಬಿದ್ದ ನೆಳವಿನ ಹಾಂಗೆ
ಇದೊಂದು ಹವ್ಯಕ ಭಾಷೆಲಿ ಬಳಕೆಲಿ ಇಪ್ಪ ಅಪರೂಪದ ನುಡಿಗಟ್ಟು. ತುಂಬಾ ನಿದಾನವಾಗಿ ಕೆಲಸ ಮಾಡುವೋರ ಬಗ್ಗೆ ,ಆಸಕ್ತಿ ಇಲ್ಲದ್ದೆ ಬೇಕಾ ಬೇಡವಾ ಹೇಳುವ ಹಾಂಗೆ ಇಪ್ಪೋರ ಬಗ್ಗೆ ಬಳಸುವ ಮಾತಿದು.
ಯಾವುದೇ ಕೆಲಸ ಮಾಡುವಗಲೂ ನಮಗೆ ಆಸಕ್ತಿ ಶ್ರದ್ಧ  ಬೇಕು.ಅದಿಲ್ಲದ್ದರೆ ಆ ಕೆಲಸವ ಮಾಡುವವ ನಿದಾನಕ್ಕೆ ಬೇಜವಾಬ್ದಾರಿಲಿ ಮಾಡುತ್ತ.ಅದರ ಬೇಗ ಮುಗಿಸಕ್ಕು ಹೇಳುವ ಉದ್ದೇಶ ಇದ್ದ ಹಾಂಗೆ ಕಾಣ್ತಿಲ್ಲೆ. ನಿದಾನಕ್ಕೆ ಆ ಕಡೆ ಈ ಕಡೆ ಗೆಬ್ಬಾಯಿಸಿಕೊಂಡು ಮಾಡುತ್ತಾ ಇರ್ತವು‌.ಅಂತೋರ ಬಗ್ಗೆ ವಿವರುಸುವಗ ಅದು ಎಂತ ಚುರುಕಿಲ್ಲೆ ಯಾವ ಕೆಲಸಲ್ಲೂ ಹಿಡಿತ ಇಲ್ಲೆ ಶ್ರದ್ಧೆ ಇಲ್ಲೆ.ಹೆಜ್ಜೆಲಿ ಬಿದ್ದ ನೆಳವಿನ ಹಾಂಗೆ ಇದ್ದು ಹೇಳಿ ಹೇಳ್ತವು.
ಹೆಜ್ಜೆ ಅಂಟು ಅಂಟಾಗಿ ಇಪ್ಪ ಕಾರಣ ನೆಳವು ಹೆಜ್ಜೆಗೆ ಬಿದ್ದರೆ ಅದಕ್ಕೆ ಬೇಗ ಬೇಗ ಹೋಪಲೆ ಎಡ್ತಿಲ್ಲೆ ಅಲ್ಲದ್ದೆ ನಡು ನಡುವೆ ಅದು ಹೆಜ್ಜೆ ತಿಂತುದೆ ಹಾಂಗಾಗಿ ಅದಕ್ಕೆ ಬೇಗ ಹೆರ ಬಪ್ಪ ಗುರಿ ಇದ್ದ ಹಾಂಗೂ ಕಾಣ್ತಿಲ್ಲೆ ಅಲ್ಲದ್ದೆ ಬೇಗ ಹೋಪಲೆ ಎಡ್ತಿಲ್ಲೆ ಹಾಂಗಾಗಿ ಚುರುಕು ಇಲ್ಲದ್ದೋರ ಬಗ್ಗೆ ಈ ಮಾತಿನ ಬಳಕೆ ಮಾಡುತ್ತವು.
© ಡಾ.ಲಕ್ಷ್ಮೀ ಜಿ ಪ್ರಸಾದ

No comments:

Post a Comment